ಹೊನ್ನಾವರದ ಎಸ್.ಡಿ.ಎಂ.ಕಾಲೇಜಿನ ಕ್ರೀಡಾಂಗಣದಲ್ಲಿ ವಿಭಾಗ ಮಟ್ಟದ ಅರಣ್ಯ ಇಲಾಖಾ ಕ್ರೀಡಾಕೂಟ -2023

ಹೊನ್ನಾವರ :- ಎಸ್.ಡಿ.ಎಂ.ಕಾಲೇಜಿನ ಕ್ರೀಡಾಂಗಣದಲ್ಲಿ ಹೊನ್ನಾವರ ವಿಭಾಗ ಮಟ್ಟದ ಅರಣ್ಯ ಇಲಾಖಾ ಕ್ರೀಡಾಕೂಟ -2023 ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿದ ಹೊನ್ನಾವರ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ.ಸಿ ಮಾತನಾಡಿ, ಅರಣ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ. ಒಂದು ದಿನ ಬಿಡುವು ಮಾಡಿಕೊಂಡು ಕೆಲಸದ ಒತ್ತಡದಿಂದ ಹೊರಬಂದು ಕ್ರೀಡಾಮನೋಭಾವದಿಂದ ಎಲ್ಲರೂ ಸ್ಪರ್ಧೆಯಲ್ಲಿ ಭಾಗವಹಿಸಿ ಎಂದರು.



ಇದೇ ವೇಳೆ ಎಸ್.ಎಸ್.ಲಿಂಗಾಣಿ,ಎಸಿಎಫ್, ಹೊನ್ನಾವರ,ಜಿ.ಲೋಹಿತ್, ಎಸಿಎಫ್ ಕುಮಟಾ, ಗಿರೀಶ್ ಪಿ.ಬಿ , ಎಸಿಎಫ್ ಭಟ್ಕಳ ಹಾಜರಿದ್ದರು. ಉಪವಲಯ ಅರಣ್ಯಾಧಿಕಾರಿ ದಿವ್ಯಾ ಪಟಗಾರ ಕಾರ್ಯಕ್ರಮವನ್ನು ನಿರ್ವಹಿಸಿದರು.