ಭಟ್ಕಳ: ತಾಲೂಕಿನಲ್ಲಿ ಅಬ್ಬರದ ಮಳೆ ಹಿನ್ನೆಲೆ ಶಿರಾಲಿ, ಕಾಯ್ಕಿಣಿ, ಮುಂಡಳ್ಳಿ, ಮುಟ್ಟಳ್ಳಿ ಬೆಂಗ್ರೆ ಹಾಗೂ ಮತ್ತಿತರ ಜಲಾವೃತ ಗ್ರಾಮಗಳಲ್ಲಿನ ಜನರನ್ನು ಅಗ್ನಿಶಾಮಕ, ಎನ್.ಡಿ.ಆರ್.ಎಫ್ ತಂಡ, ಪೋಲಿಸ್ ಹಾಗೂ ಜಿಲ್ಲಾಡಳಿತದ ವತಿಯಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
ಪಡುಶಿರಾಲಿ ಯಲ್ಲಿ ಗ್ರಾಮಗಳು ಮುಳುಗಡೆಯಾಗಿದ್ದು 300ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ. ಎನ್.ಡಿ.ಆರ್.ಎಫ್ ಹಾಗೂ ಅಗ್ನಿಶಾಮಕ ದಳದಿಂದ ಜನರ ರಕ್ಷಣೆ ಮಾಡುವ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಶಿರಾಲಿ ಚಂಡಮಾರುತ ಆಶ್ರಯತಾಣ ಹಾಗೂ ಪುರವರ್ಗ ಶಾಲೆಯಲ್ಲಿ ಜಿಲ್ಲಾಡಳಿತ ಕಾಳಜಿ ಕೇಂದ್ರಗಳನ್ನು ತೆರೆದಿದೆ.
ಸಾರ್ವಜನಿಕರು ಸಹಾಯಕ್ಕಾಗಿ ಭಟ್ಕಳ ತಾಲೂಕಾ ಕಂಟ್ರೋಲ್ ರೂಂ ನಂ. 08385-226422, ಹಾಗೂ ಜಿಲ್ಲಾ ಕಂಟ್ರೋಲ್ ರೂಂ. 1077/ 08382-229857 ಗೆ ಸಂಪರ್ಕಿಸಲು ಜಿಲ್ಲಾಡಳಿತ ಮನವಿ ಮಾಡಿದೆ.