BIG BREAKING NEWS ಫಾಸಿಲ್ ಬರ್ಬರ ಹತ್ಯೆ ಮಾಡಿದ ಹಂತಕರ ಬಂಧನ.!

ಮಂಗಳೂರು: ಫಾಸಿಲ್ ಹತ್ಯೆ ಮಾಡಿದ 6 ಮಂದಿ ಹಂತಕರನ್ನು ಬಂಧನ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ. ಸುಹಾನ್ ಶೆಟ್ಟಿ, ನೇಪಾಳಿ ಮೋಹನ್, ಗಿರಿಧರ್, ಅಭಿಷೇಕ್ ಶ್ರೀನಿವಾಸ್ಳ್, ದೀಕ್ಷಿತ್ ಬಂಧಿತರು.

ಕಾರಿನಲ್ಲಿ ತೆರಳಿ ಫಾಸಿಲ್‌ನನ್ನು ಹತ್ಯೆ ಮಾಡಲಾಗಿತ್ತು. ಫಾಸಿಲ್ ಹತ್ಯೆಗೆ ಬಳಸಿದ್ದ ಕಾರು ವಶಕ್ಕೆ ಪಡೆದ ಬಳಿಕ ಹತ್ಯೆ ಸಂಚಿನ ಮಾಹಿತಿ ಸುಳಿವು ಸಿಕ್ಕಿದೆ. ಜು27 ರಂದು ಫಾಸಿಲ್ ಹತ್ಯೆಗೆ ಹಂತಕರು ಸಂಚು ರೂಪಿಸಿದ್ರು. ಜುಲೈ 28 ರಂದು ಮಾರಕಾಸ್ತರಗಳೊಂದಿಗೆ ಬಂದು ಹತ್ಯೆ ಮಾಡಿದ್ರು. ಅಭಿಶೇಕ್ ಮತ್ತು ಸುಹಾಸ್ ಸೇರಿ ಫಾಸಿಲ್ ಕೊಲೆಗೆ ಸಂಚು ರೂಪಿಸಿದ್ರು. ಬಳಿಕ ಪಾಸಿಲ್ ಕೊಲೆ ಬಗ್ಗೆ ಚರ್ಚೆ ನಡೆಸಿದ್ರು. ಜು 28 ರಂದು ಹಂತಕರು ಫಾಸಿಲ್ ನನ್ನು ಕೊಚ್ಚಿ ಕೊಲೆ ಮಾಡಿದ್ರು.