ಆಲೂರಿನಲ್ಲಿ ಕಾಡಾನೆ ದಾಳಿ : ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ

ದಾಂಡೇಲಿ : ತಾಲೂಕಿನ ಆಲೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದ ಸ್ಥಳೀಯ ರೈತರು ತೀವ್ರ ಸಂಕಷ್ಟದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.

ಪ್ರತಿದಿನ ರಾತ್ರಿ ವೇಳೆಯಲ್ಲಿ ಕಾಡಾನೆಗಳು ಹೊಲ, ಗದ್ದೆಗಳಿಗೆ ನುಗ್ಗಿ ಬೆಳೆಗಳನ್ನು ದ್ವಂಸಗೊಳಿಸುತ್ತಿವೆ. ಸ್ಥಳೀಯ ರೈತರು ಬೆಳೆದ ಭತ್ತ, ಜೋಳ, ಕಬ್ಬು ಹೀಗೆ ಮೊದಲಾದ ಬೆಳೆಗಳು ಆನೆಗಳ ದಾಳಿಗೊಳಗಾಗಿ ನಾಶವಾಗುತ್ತಿದೆ. ವರ್ಷಪೂರ್ತಿ ರಕ್ತವನ್ನು ಬೆವರಿನಂತೆ ಸುರಿಸಿ ಶ್ರಮವಹಿಸಿ ದುಡಿದ ರೈತರಿಗೆ ಇನ್ನೇನು ಇಳುವರಿ ಕೈಗೆ ಬರಬೇಕು ಎನ್ನುವಷ್ಟರೊಳಗೆ ಕಾಡಾನೆಗಳ ದಾಳಿ ಮತ್ತಷ್ಟು ಆಘಾತವನ್ನು ತಂದಿದೆ. ಶನಿವಾರ ತಡರಾತ್ರಿ ಕಾಡಾನೆಗಳು ದಾಳಿ ಮಾಡಿರುವುದು ಇಂದು ಭಾನುವಾರ ಬೆಳಿಗ್ಗೆ ಸ್ಥಳೀಯ ರೈತರ ಗಮನಕ್ಕೆ ಬಂದಿದೆ.

ವನ್ಯಪ್ರಾಣಿಗಳ ದಾಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.