ದಾಂಡೇಲಿ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆದರ್ಶ ಅವರ ಜೀವನ ವ್ಯಕ್ತಿತ್ವ ಸದಾ ಸ್ಮರಣೀಯವಾಗಿದೆ. ಅಹಿಂಸಾತ್ಮಕ ಹೋರಾಟದ ಮೂಲಕ ಇಡೀ ರಾಷ್ಟ್ರದ ಜನರನ್ನು ಸಂಘಟಿಸಿದ ರೀತಿ ಇಡೀ ಜಗತ್ತಿಗೆ ಮಾದರಿ ಎಂದು ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರು ಹೇಳಿದರು.
ಅವರು ಇಂದು ಸೋಮವಾರ ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್, ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್, ಸಿಪಿಐ ಭೀಮಣ್ಣ.ಎಂ.ಸೂರಿ, ಪಿಎಸ್ಐಗಳಾದ ಐ.ಆರ್.ಗಡ್ಡೇಕರ್, ಯಲ್ಲಪ್ಪ.ಎಸ್, ಕೃಷ್ಣ ಗೌಡ, ಜಗದೀಶ್, ನಗರ ಸಭೆಯ ನಿಕಟಪೂರ್ವ ಅಧ್ಯಕ್ಷೆ ಸರಸ್ವತಿ ರಜಪೂತ್, ನಿಕಟಪೂರ್ವ ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್, ಕಾಂಗ್ರೆಸ್ ಮುಖಂಡರಾದ ದಾದಾಪೀರ್ ನದೀಮುಲ್ಲಾ, ನಗರಸಭಾ ಸದಸ್ಯರುಗಳಾದ ಮಜೀದ್ ಸನದಿ, ಮೋಹನ ಹಲವಾಯಿ, ಬುದ್ಧಿವಂತಗೌಡ ಪಾಟೀಲ್, ವಿಷ್ಣು ವಾಜ್ವೆ, ಮಹಾದೇವ ಜಮಾದಾರ, ಸುಧಾ ರಾಮಲಿಂಗ ಜಾಧವ್, ರಮಾ ರವೀಂದ್ರ, ಸುಗಂಧ ಕಾಂಬಳೆ, ಸಪೂರ ಯರಗಟ್ಟಿ, ವೆಂಕಟ್ರಮಣಮ್ಮ ಮೈಥುಕರಿ, ಶಾಹೀದಾ ಪಠಾಣ್, ರುಹಿನಾ ಖತೀಬ್, ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ರಾಘವೇಂದ್ರ, ರಾಜೇಶ್ ತಿವಾರಿ, ಕಾಗದ ಕಾರ್ಖಾನೆಯ ಖಲೀಲ್ ಕುಲಕರ್ಣಿ, ರಾಜು ರೋಸಯ್ಯ, ಬಸೀರ್ , ರಾಜು, ಮಹೇಶ್ ನಾಯ್ಕ ಹಾಗೂ ಕಾಗದ ಕಾರ್ಖಾನೆಯ ಅಧಿಕಾರಿಗಳು ಉಪಸ್ಥಿತರಿದ್ದರು