ಪುಟ್ಟಪ್ಪನಕೆರೆಯಲ್ಲಿ ಐದಕ್ಕೂ ಹೆಚ್ಚು ಗಣೇಶ ಮೂರ್ತಿ ವಿಸರ್ಜನೆ

ಸಿದ್ದಾಪುರ : ಪಟ್ಟಣ ವ್ಯಾಪ್ತಿಯ ಪುಟ್ಟಪ್ಪನಕೆರೆಯಲ್ಲಿ ಸೋಮವಾರ ಐದಕ್ಕೂ ಹೆಚ್ಚು ಗಣೇಶ ಮೂರ್ತಿ ವಿಸರ್ಜನೆ ಮಾಡಿದ್ದು ವಿಸರ್ಜನೆ ವೇಳೆ ನೂರಾರು ಭಕ್ತರು ಕೆರೆಯ ಸುತ್ತಲೂ ಎಲ್ಲೆಲ್ಲೂ ಜಾಗವಿಲ್ಲದಂತೆ ನೆರೆದಿದ್ದರು, ವಿಶಾಲ ಕೆರೆಯಲ್ಲಿ ಮದ್ಯಕೆರೆಯಲ್ಲಿ ನಡೆದ ವಿಸರ್ಜನೆಯ ದೃಶ್ಯವನ್ನು ಎಲ್ಲರೂ ಕಣ್ಣು ತುಂಬಿಕೊಂಡರು. ಸೋಮವಾರ ಪಟ್ಟಣ ವ್ಯಾಪ್ತಿಯಲ್ಲಿ ಪ್ರತಿಷ್ಠಾಪಿಸಿದ ಸುಮಾರು ಐದಕ್ಕೂ ಹೆಚ್ಚು ಗಣೇಶನ ವಿಸರ್ಜನೆ ಮಾಡಲಾಯಿತು. ಎಲ್ಲಾ ಗಣೇಶನ ಮೆರವಣಿಗೆ ಹೊರಡಿಸುವುದು ರಾತ್ರಿ ಆಗಿರುವುದರಿಂದ ವಿಸರ್ಜನೆಯ ವೇಳೆ ಮಧ್ಯರಾತ್ರಿ ಆಗುವ ಕಾರಣದಿಂದಾಗಿ ಮಕ್ಕಳು ಮಹಿಳೆಯರು ಆ ದೃಶ್ಯವನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ ಹಾಗಾಗಿ ಸೋಮವಾರ ಸೂರ್ಯನ ಬೆಳಕಿರುವಾಗಲೇ ಹಲವು ಗಣೇಶ ಮೂರ್ತಿ ವಿಸರ್ಜನೆಯನ್ನ ಮಾಡಿರುವುದರಿಂದ ಈ ದೃಶ್ಯವನ್ನು ನೋಡಲು ನೂರಾರು ಜನತೆ ಬಂದಿದ್ದರು, ಮೆರವಣಿಗೆಯು ಸಹ ಅತ್ಯಂತ ಸರಳವಾಗಿದ್ದು ಡೊಳ್ಳು ಕುಣಿತ, ಜಾಗಟೆ ಬಾರಿಸುತ್ತ ಪಟಾಕಿ ಸಿಡಿಸಿಕೊಂಡು ಬಂದಿರುವುದು ಎಲ್ಲರ ಗಮನ ಸೆಳೆಯಿತು.