ಗಾಂಜಾ ಪ್ರಕರಣ… ಮಾಹಿತಿ ನೀಡಿ ತಾನಾಗಿಯೇ ಸಿಕ್ಕಿಬಿದ್ದ ಆಸಾಮಿ…!

ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದ ಹೊಯ್ನಿರ್ ಸುಬ್ರಾಯ ಶೆಟ್ಟಿ ಮನೆಯಲ್ಲಿ ದೊರೆತ ಗಾಂಜಾ ಕೇಸ್ ಪ್ರಕರಣ ಪೊಲೀಸರ ಚಾಣಕ್ಷತನದಿಂದ ನೈಜ ಆರೋಪಿ ಕೊನೆಗೂ ಪತ್ತೆಯಾಗಿದ್ದಾನೆ. ಮಾಹಿತಿ ಕೊಟ್ಟ ಅಸಾಮಿ ಅಸಲಿ ಆರೋಪಿಯಾಗಿರುವುದು ಪ್ರಕರಣ ಟ್ವಿಸ್ಟ್ ಪಡೆದಿದೆ. ಹೊಯ್ನಿರ ಸಮೀಪ ಸುಬ್ರಾಯ ಶೆಟ್ಟಿ ಎನ್ನುವವರ ಮನೆಯಲ್ಲಿ 50 ಗ್ರಾಂ ತೂಕದ 11 ಗಾಂಜಾದ ಸಸಿಗಳು ಪ್ಲಾಸ್ಟಿಕ್ ಚೀಲದಲ್ಲಿ ಇರುವ ಕುರಿತು ಈಶ್ವರ ಕೊಡಿಯಾ ಎನ್ನುವವರು ಮಾಹಿತಿ ನೀಡಿದ್ದರು. ಈ ವೇಳೆ ದಾಳಿ ನಡೆಸಿದಾಗ ಸುಬ್ರಾಯ ಶೆಟ್ಟಿ ಅವರ ಮನೆಯಲ್ಲಿ ಮಧ್ಯ ಹಾಗೂ ಚೀಲದಲ್ಲಿ ಗಾಂಜಾ ಸಸಿ ಪತ್ತೆಯಾಗಿತ್ತು. ತನಿಖೆ ಮುಂದುವರೆಸಿದ ಪೊಲೀಸರು ಯಾರೊ ತಂದು ಇಟ್ಟಿರುವ ಅನುಮಾನ ಬಂದಾಗ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಪಿಎಸೈ ಮಹಾಂತೇಶ ನಾಯಕ ಮಮತಾ ನಾಯ್ಕ ಹಾಗೂ ಸಿಬ್ಬಂದಿಗಳು ಚುರುಕುಗೊಳಿಸಿ ಹಲವು ಆಯಾಮಗಳಿಂದ ತನಿಖೆ ನಡೆಸಿದ್ದರು. ಈ ವೇಳೆ ವೈಯಕ್ತಿಕ ದ್ವೇಷದಿಂದ ನಡೆದದ್ದು ಎಂದು ಖಚಿತವಾಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿದಾಗ ಜಿಲ್ಲೆಯ ಬೇರಡೆಯಿಂದ ಪೊಲೀಸರಿಗೆ ಮಾಹಿತಿ ನೀಡಿದವನೇ ಸಸಿ ತಂದಿರುವುದು ತಿಳಿದು ಬಂದಿದೆ. ಆಗ ಆತನನ್ನು ಕರೆ ತಂದು ವಿಚಾರಿಸಿದಾಗ ವೈಯುಕ್ತಿಕ ದ್ವೇಷದಿಂದ ಮಾಡಿರುದಾಗಿ ಪೊಲೀಸರ ಬಳಿ ತಪ್ಪೊಪಿಕೊಂಡಿದ್ದಾನೆ. ಈತನ ವಿರುದ್ದ ಕಲಂ 20(ಎ)20(ಬಿ) ಎನ್.ಡಿ.ಪಿ.ಎಸ್ ಕಾಯ್ದೆ1985 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಹಳೆಯ ಆರೋಪಿ,ಹೊಸಕೃತ್ಯ:20 ವರ್ಷದ ಹಿಂದೇ ತಾಲೂಕಿನ ಸಾಲ್ಕೋಡ ಮಠದ ಭಟ್ಟರ ಮನೆ ಮತ್ತು ಬಾಳೆಗದ್ದೆಯಲ್ಲಿ ನಡೆದ ದರೋಡೆ ಪ್ರಕರಣದ ಪ್ರಮುಖ ಆರೋಪಿ ಆಗಿದ್ದ ಈಶ್ವರ ಕೊಡಿಯಾ ಜೈಲು ಸೇರಿದ್ದರು. ಈಗ ಗಾಂಜಾ ಪ್ರಕರಣದಲ್ಲಿ ಮತ್ತೇ ಬಂಧನ ಆಗಿದ್ದಾರೆ. ತನಿಖೆಗೆ ಆರೋಪಿಯನ್ನು ಭಟ್ಟಳ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.ಎಸ್ ಪಿ ವಿಷ್ಣುವರ್ಧನ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಸಂತೋಷ ಕಾಯ್ಕಿಣಿ, ಪಿಎಸ್ಐ ಮಹಾಂತೇಶ್ ನಾಯ್ಕ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.