ಹೊನ್ನಾವರ ತಾಲೂಕಿನ ಚಿಕ್ಕನಕೋಡ ಗ್ರಾಮದಲ್ಲಿ ಪತಿಯ ಮೇಲಿನ ಕೋಪಕ್ಕೆ ಆತನ ಪತ್ನಿಗೆ ಇಬ್ಬರು ವ್ಯಕ್ತಿಗಳು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದು, ನೊಂದ ಮಹಿಳೆ ಇಬ್ಬರ ಮೇಲೆ ದೂರು ನೀಡಿದ ಘಟನೆ ನಡೆದಿದೆ… ಹೊನ್ನಾವರ ತಾಲೂಕಿನ ಚಿಕ್ಕನಕೋಡ ಗ್ರಾಮದಲ್ಲಿ ಪತಿಯ ಮೇಲಿನ ಕೋಪಕ್ಕೆ ಆತನ ಪತ್ನಿಗೆ ಇಬ್ಬರು ವ್ಯಕ್ತಿಗಳು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದು, ನೊಂದ ಮಹಿಳೆ ಇಬ್ಬರ ಮೇಲೆ ದೂರು ನೀಡಿದ ಘಟನೆ ನಡೆದಿದೆ.ನೊಂದ ಮಹಿಳೆ ಚಿಕ್ಕನಕೋಡ ಗ್ರಾ.ಪಂ ವ್ಯಾಪ್ತಿಯ ನಿವಾಸಿಯಾಗಿದ್ದು, ಪತಿ ಪ್ರಶಾಂತ ಮಾರುತಿ ನಾಯ್ಕ ಭಂಡೂರೇಶ್ವರ ದೇವಸ್ಥಾನದ ಧರ್ಮದರ್ಶಿಯಾಗಿದ್ದಾರೆ. ಗುಣವಂತೆ ಹಾಗೂ ಕರ್ಕಿ ಗ್ರಾಮದ ನವೀನ ನಾಯ್ಕ, ಮಹೇಶ ನಾಯ್ಕ ಎಂಬುವರೇ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪಿಗಳಾಗಿದ್ದಾರೆ…
ಭಂಡೂರೇಶ್ವರ ದೇವಸ್ಥಾನದ ಬಗ್ಗೆ ಈ ಹಿಂದಿನಿಂದಲೂ ಅಪಪ್ರಚಾರ ಮಾಡುವುದು, ಭಕ್ತರ ಮಧ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಕೂಡ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದ್ರು, ಈ ಬಗ್ಗೆ ಪ್ರಶಾಂತ ನಾಯ್ಕ ಹೊನ್ನಾವರ ಪೊಲೀಸ್ ಠಾಣೆಯಲ್ಲಿಇಬ್ಬರ ವಿರುದ್ಧ ದೂರ ನೀಡಿದ್ರು. ಇದೇ ಕಾರಣದಿಂದ ಮೊದಲಿನಿಂದಲೂ ದ್ವೇಷ ಸಾಧಿಸ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.ಸೆ.21ರಂದು ಸಂಜೆ ಇಬ್ಬರು ನಮ್ಮ ಮನೆಯ ಹತ್ತಿರ ಬಂದು ಅನುಚಿತವಾಗಿ ವರ್ತಿಸಿದ್ದಲ್ಲದೇ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಪೋಲಿಸ್ ಠಾಣೆಗೆ ದೂರು ನೀಡಿದ್ರೆ ನಿಮ್ಮನ್ನು ಸುಮ್ಮನೇ ಬಿಡೋದಿಲ್ಲ ಎಂದು ಚಾಕು ತೋರಿಸಿ ಅವಾಜ್ ಹಾಕಿ ಹೋಗಿದ್ದಾರೆ.ಇನ್ನುಈ ಕುರಿತು ನೊಂದ ಮಹಿಳೆ ಹೊನ್ನಾವರ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ..



