ಹಳಿಯಾಳ : ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಇಂದು ಭಾನುವಾರ ಹಳಿಯಾಳ ಪಟ್ಟಣದಲ್ಲಿರುವ ತಾಲೂಕು ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕರಾದ ಸುನೀಲ್ ಹೆಗಡೆ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಎಲ್ಇಡಿ ಟಿವಿ ಮೂಲಕ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುನೀಲ್ ಹೆಗಡೆಯವರು ದೇಶಕ್ಕಾಗಿಯೇ ಜನ್ಮ ಪಡೆದ ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕಾಗಿ ತನ್ನನ್ನು ತಾನು ಸಮರ್ಪಣಾ ಭಾವದಿಂದ ಸಮರ್ಪಿಸಿಕೊಂಡಿದ್ದಾರೆ. ದೇಶವೇ ನನ್ನ ಸರ್ವಸ್ವ ಎಂದು ತಿಳಿದು ದೇಶಕ್ಕಾಗಿಯೇ ಜನ್ಮವೆತ್ತ ನರೇಂದ್ರ ಮೋದಿಯವರ ನಾಯಕತ್ವ ಮತ್ತಷ್ಟು ವರ್ಷಗಳವರೆಗೆ ಈ ದೇಶಕ್ಕೆ ಬೇಕಾಗಿದೆ ಎಂದರು
ಈ ಸಂದರ್ಭದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಮುತ್ನಾಳೆ, ಪುರಸಭೆ ಸದಸ್ಯರಾದ ಉದಯ ಹೂಲಿ, ಸಂತೋಷ ಘಟಕಾಂಬಳೆ, ಪ್ರಮುಖರಾದ ಶಿವಾಜಿ ನರಸಾನಿ, ಚೂಡಪ್ಪಾ ಬೋಬಾಟಿ, ತಾನಾಜಿ ಪಟ್ಟೇಕರ, ಹನುಮಂತ ಚಲವಾದಿ, ಯಲ್ಲಪ್ಪ ಹೆಳವರ, ಆಕಾಶ ಉಪ್ಪಿನ, ಅರುಣ ನಾಕಾಡಿ, ಜಯಲಕ್ಷ್ಮೀ ಚವ್ಹಾಣ, ಮಾಲಾ ಹುಂಡೇಕರ, ಮೊದಲಾದವರು ಉಪಸ್ಥಿತರಿದ್ದರು.



