ಸಿದ್ದಾಪುರದಲ್ಲಿ ಸಂಭ್ರಮದಿಂದ ಜರುಗಿದ ಸಾಮೂಹಿ ಗೌರಿ ವಿಸರ್ಜನೆ

ಸಿದ್ದಾಪುರ ತಾಲೂಕಿನ ಕೋಲಸಿರ್ಸಿ, ಗುಡ್ಡೆಕೇರಿಯಲ್ಲಿ ಶುಕ್ರವಾರ ಸಂಜೆ ಸಾಮೂಹಿಕ ಗೌರಿ ವಿಸರ್ಜನೆ ಮಾಡುವ ಮೂಲಕ ಗೌರಿ ಗಣೇಶ ಹಬ್ಬ ಸಂಪನ್ನಗೊಂಡಿತು.ಸಿದ್ದಾಪುರ ತಾಲೂಕಿನ ಕೋಲಸಿರ್ಸಿ ಗುಡ್ಡೆಕೇರಿಯಲ್ಲಿ ಶುಕ್ರವಾರ ಸಂಜೆ ಸಾಮೂಹಿಕ ಗೌರಿ ವಿಸರ್ಜನೆ ಮಾಡುವ ಮೂಲಕ ಗೌರಿ ಗಣೇಶ ಹಬ್ಬ ಸಂಪನ್ನಗೊಂಡಿತು. ಮಂಗಳವಾರದಿಂದ ಆರಂಭವಾದ ಹಬ್ಬವು ಸಡಗರ ಸಂಭ್ರಮದೊಂದಿಗೆ ವಿಜೃಂಭಣೆಯಿಂದ ನಡೆದು ಶುಕ್ರವಾರ ಸಂಪನ್ನಗೊಂಡಿತು. ಹೆಣ್ಣುಮಕ್ಕಳು ಮನೆಯಲ್ಲಿ ಮಧ್ಯಾಹ್ನ ಶ್ರೀ ಗೌರಿಗೆ ವಿಶೇಷ ಪೂಜೆ ಸಲ್ಲಿಸಿ ಬಗೆಬಗೆಯ ಕಜ್ಜಾಯ, ಸಿಹಿ ತಿನಿಸು, ಪಾಯಸ ಮುಂತಾದ ಖಾದ್ಯ ನೈವೇದ್ಯ ಅರ್ಪಿಸಿ ಧೂಪ ದೀಪ ಕರ್ಪೂರದ ಆರತಿ ಬೆಳಗಿ ಹಣ್ಣುಕಾಯಿ ಸೇವೆ ಸಲ್ಲಿಸಿದ್ರು. ಬಳಿಕ ಊರಿನ ಮುಖ್ಯ ರಸ್ತೆಯಲ್ಲಿ ಜಾಗಟೆ ಬಾರಿಸುತ್ತ, ಪಟಾಕಿ ಸಿಡಿಸಿ ಯುವಕರು ಸಂಭ್ರಮದಿಂದ ಸಾಗಿದರು. ಮಹಿಳೆಯರು ಶ್ರೀ ಗೌರಿ ಹೊತ್ತು ಸಾಗಿದರು. ವಿಸರ್ಜನೆ ಸ್ಥಳವಾದ ಹಳ್ಳದ ಬಳಿ ಸಾಮೂಹಿಕ ಪೂಜೆ ಸಲ್ಲಿಸಿ ವಿಸರ್ಜನೆ ಮಾಡಿದರು…