ಹೆರಾವಲಿ ಬಡ್ನಕೋಡ ಎಂಬಲ್ಲಿ ಹಣದ ವಿಚಾರಕ್ಕೆ ಈರ್ವರ ಮೇಲೆ ಐವರಿಂದ ಹಲ್ಲೆ

ಹೊನ್ನಾವರ: ತಾಲೂಕಿನ ಚಿಕ್ಕನಕೊಡ್ ಗ್ರಾಪಂ ವ್ಯಾಪ್ತಿಯ ಹೆರಾವಲಿ ಬಡ್ನಕೋಡ ಎಂಬಲ್ಲಿ ಹಣದ ವಿಚಾರಕ್ಕೆ ಈರ್ವರ ಮೇಲೆ ಐವರಿಂದ ಹಲ್ಲೆಯಾಗಿರುವ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲೂಕಿನ ಹೆರಾವಲಿ ಬಡ್ನಕೋಡ ನಿವಾಸಿ ಪ್ರಶಾಂತ ಮಾರುತಿ ನಾಯ್ಕ,ಇಡಗುಂಜಿಯ ನಿವಾಸಿ ಯೋಗೇಶ‌ ನಾಯ್ಕ,ಹಳದೀಪುರದ ವಿನಾಯಕ ,ಹೆರಾವಲಿಯ ಜಗದೀಶ ಗೋವಿಂದ ನಾಯ್ಕ,ಕುಮಟಾ ಊರುಕೇರಿಯ ವಿಜು ನಾಯ್ಕ ಆರೋಪಿತರಾಗಿದ್ದಾರೆ.ಕರ್ಕಿ ಮಠದ ಕೇರಿಯ ಮಹೇಶ ಲಕ್ಷ್ಮಣ ನಾಯ್ಕ ಎನ್ನುವವರು ಅವರ ಗೆಳೆಯರಾದ ಗುಣವಂತೆಯ ನವೀನ ಈಶ್ವರ ನಾಯ್ಕ ಎನ್ನುವವರನ್ನು ಬಡ್ನಕೋಡದ ದೇವಸ್ಥಾನಕ್ಕೆ ಕರೆದೊಯ್ದಿದ್ದರು. ದೇವಾಲಯ ಒಳಹೊಕ್ಕಿ ದೇವರಿಗೆ ಕೈ ಮುಗಿದು ನಂತರ ಅಲ್ಲಿಯೇ ಇದ್ದ ಆರೋಪಿತ ಪ್ರಶಾಂತ ನಾಯ್ಕ ಅವರ ಬಳಿ ನವೀನ ನಾಯ್ಕ ಅವರು ಹಣದ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಆರೋಪಿ‌ ಪ್ರಶಾಂತ್ ನಾಯ್ಕ ,”ಇಲ್ಲಿ ಮಾತನಾಡುವುದು ಬೇಡ” ಎಂದು ದೇವಸ್ಥಾನದ ಬೇರೆ‌ ಕಟ್ಟಡಕ್ಕೆ ಕರೆದೊಯ್ದಿದ್ದಾರೆ.ಈ ವೇಳೆ ಐವರು ಆರೋಪಿತರು ಸೇರಿ ಸುತ್ತುವರೆದು ನವೀನ್ ನಾಯ್ಕ ಅವರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. “ಕೊಡಬೇಕಾದ ಹಣ ದೇವರಿಗೆ ಬಿಟ್ಟುಬಿಡು ಮತ್ತೆ ಹಣ ಅಂತಾ ಕೇಳಿದರೆ ನಿನ್ನ ಹೆಣ ಹಾಕುತ್ತೇವೆ” ಎಂದು ನವೀನ್ ನಾಯ್ಕ ಎಂಬಾತನ ತಳ್ಳಿ ಆತನ ಕುತ್ತಿಗೆಯಲ್ಲಿದ್ದ ಬಂಗಾರದ ಚೈನ್ ನ್ನು ಎಳೆಯುವ ಪ್ರಯತ್ನ ಮಾಡಿ,ಅಲ್ಲಿಯೇ ಇದ್ದ ರೀಪಿನ ತುಂಡಿನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.ಈ ವೇಳೆ ಮಹೇಶ್ ನಾಯ್ಕ ಅವರು ಗೆಳೆಯ ನವೀನ್ ಅವರನ್ನು ತಪ್ಪಿಸಲು ಪ್ರಯತ್ನಪಟ್ಟಿದ್ದಾರೆ.”ಅವನ ತಪ್ಪಿಸಲು ಬಂದರೆ ನಿನ್ನನ್ನು ಇವನ ಜೊತೆ ಕೊಂದು ಹೊಳೆಗೆ ಎಸೆಯಯತ್ತೇವೆ” ಎಂದು ದೂಡಿದ್ದಾರೆ ಎನ್ನಲಾಗಿದೆ. ದೀಪದ ಗುಡ್ನದಿಂದ,ದೊಣ್ಣೆಯಿಂದ ನವೀನನ ಮೇಲೆ ಹಲ್ಲೆ ಮಾಡಿದ್ದಾರೆ.ನವೀನ್ ಅವರ ತಲೆಯಿಂದ ರಕ್ತ ಸುರಿಯಲಾರಂಭಿಸಿದಾಗ ಆತ‌ನ ಮೇಲೆತ್ತಲು ಪ್ರಯತ್ನಿಸಿದಾಗ ತನಗು ಕಾಲಿನಿಂದ ಒದ್ದಿದ್ದಾರೆ,ಈ ವೇಳೆ ತನಗು ಗಾಯನೋವಾಗಿದೆ.ನಾವು ಕೂಗಿಕೊಂಡಾಗ ದೇವಾಲಯದ ಭಕ್ತರು ಕಟ್ಟಡ ಸಮೀಪ ಬರುವುದು ನೋಡಿ ಪುನಃ ಜೀವ ಬೆದರಿಕೆ ಹಾಕಿದ್ದಾರೆ.ನಂತರ ಗಾಯಾಳು ನವೀನನಿಗೆ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಸಿದ್ದೇನೆ ಎಂದು ಮಹೇಶ್ ನಾಯ್ಕ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.