ದಾಂಡೇಲಿಯ ಅಂಚೆ ಕಚೇರಿಯಲ್ಲಿ ಬೃಹತ್ ಆಧಾರ್ ತಿದ್ದುಪಡಿ /ನೋಂದಣಿ ಮೇಳ

ದಾಂಡೇಲಿ : ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಬೃಹತ್ ಆಧಾರ್ ತಿದ್ದುಪಡಿ / ನೋಂದಣಿ ಮೇಳ ಕಾರ್ಯಕ್ರಮವನ್ನು ಇಂದು ಬುಧವಾರ ಬೆಳಗ್ಗೆ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ ಎನ್.ವಾಸರೆ ಅವರು ಜನಸಾಮಾನ್ಯರಿಗೆ ಅಂಚೆ ಇಲಾಖೆಯ ನೆರವು ಅತಿ ಉಪಯುಕ್ತವಾಗಿದೆ. ಯಾವುದೇ ಮೂಲಸೌಕರ್ಯಗಳು ಇಲ್ಲದೆ ಇರುವಂತಹ ಊರನ್ನು ತಲುಪಿದ್ದ ಇಲಾಖೆ ಇದ್ದರೆ ಅದು ಅಂಚೆ ಇಲಾಖೆ. ಅಂಚೆ ಸಿಬ್ಬಂದಿಗಳ ಸೇವೆ ಸದಾ ಸ್ಮರಣೀಯವಾಗಿದೆ. ಜನಸಾಮಾನ್ಯರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೃಹತ್ ಆಧಾರ್ ತಿದ್ದುಪಡಿ ಮತ್ತು ನೋಂದಣಿ ಮೇಳವನ್ನ ಆಯೋಜಿಸಿರುವುದು ಔಚಿತ್ಯಪೂರ್ಣವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪತ್ರಕರ್ತ ಸಂದೇಶ್.ಎಸ್.ಜೈನ್ ಸಂದರ್ಭೋಚಿತವಾಗಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಂಚೆ ನಿರೀಕ್ಷಕರಾದ ಶಿವಾನಂದ ದೊಡ್ಡಮನಿಯವರು ಅಂಚೆ ಇಲಾಖೆಯಲ್ಲಿರುವ ಸೌಲಭ್ಯಗಳನ್ನು ವಿವರಿಸಿ ಇಂದಿನಿಂದ ಸೆಪ್ಟಂಬರ್ 23ರ ವರೆಗೆ ಆಧಾರ್ ತಿದ್ದುಪಡಿ ಮತ್ತು ನೋಂದಣಿ ಮೇಳವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಇದರ ಲಾಭವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

ಅಂಚೆ ಇಲಾಖೆಯ ಸಿಬ್ಬಂದಿಗಳಾದ ಮೇರಿ ಮತ್ತು ತಂಡದವರು ಪ್ರಾರ್ಥನ ಗೀತೆ ಹಾಡಿದರು. ಸಿಬ್ಬಂದಿ ಮೇರಿ ಮಾಂಚಲ ಅವರು ಸ್ವಾಗತಿಸಿದರು. ಅಂಚೆ ಕಚೇರಿ ಪಾಲಕರಾದ ಜಿ.ಎಸ್ ಕುಲಕರ್ಣಿ ಅವರು ವಂದಿಸಿದರು. ಬಿ ರಂಗಸ್ವಾಮಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಅಂಚೆ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.