ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಸಿದ್ದಾಪುರ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಹಸೀಲ್ದಾರ ಕಚೇರಿಯಲ್ಲಿ ಸಂವಿಧಾನ ಓದು ಕಾರ್ಯಕ್ರಮ ನಡೆಯಿತು.
ಡಾ ಬಿ ಆರ್ ಅಂಬೇಡ್ಕರ್ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು.
ತಹಸೀಲ್ದಾರ ಎಮ್ ಆರ್ ಕುಲಕರ್ಣಿ ಭೋಧನ ವಿಧಿ ಬೋಧಿಸಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂವಿಧಾನದ ಆಶಯದಂತೆ ಕರ್ತವ್ಯ ಕ್ಕೆ ಚುಕ್ಕೆ ಬರದ ರೀತಿಯಲ್ಲಿ ಸಾಮಾಜಿಕ ಧಾರ್ಮಿಕ ಜ್ಯಾತ್ಯಾತೀತವಾಗಿ ಕೆಲಸ ಮಾಡೋಣ ಎಂದರು.
ಉಪನ್ಯಾಸಕ ಎನ್ ಟಿ ನಾಯ್ಕ ಉಪನ್ಯಾಸ ನೀಡಿ ಸಂವಿಧಾನದ ಆಶಯ ಮನೆ ಮಾತಾಗಬೇಕು, ನಮ್ಮ ಆಸ್ತಿ ಎಂಬ ಗೌರವ ಭಾವನೆ ಬೆಳಸಿಕೊಳ್ಳಬೇಕು, ಮುಂದಿನ ತಲೆಮಾರಿಗೆ ಸಂವಿಧಾನ ಆಶಯದ ಮಾಹಿತಿ ಕೊಡಬೇಕು ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ನಂದನ ಬೋಧಕರ ಹೆಚ್ ಕೆ ಶಿವಾನಂದ, ವೀರಭದ್ರ ನಾಯ್ಕ, ಕಿರಣ ಕಾನಡೆ,ಮುನಾವರ ಗುರ್ಖಾರ,ಮಾತನಾಡಿದರು.ಇಲಿಯಾಸ್ ಹಾಳದಕಟ್ಟಾ, ಗಾಂಧೀಜಿ ನಾಯ್ಕ್, ಲಿನಾ ಫಾರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಬಿಐ ಬಂಡೇರ ಸ್ವಾಗತಿಸಿದರು, ಕವಿತಾ ನಾಯ್ಕ ನಿರೂಪಿಸಿ ವಂದಿಸಿದರು.