ಹೊನ್ನಾವರ: ತಾಲೂಕಿನ ಪುರಾಣ ಪ್ರಶಿದ್ದ ಶ್ರೀ ಕ್ಷೇತ್ರ ಇಡಗುಂಜಿಯಲ್ಲಿ ಸೆಪ್ಟೆಂಬರ್ 19 ರಂದು ಭಾದ್ರಪದ ಮಾಸದ ಮಹಾಚೌತಿ ಆಚರಣೆ ನಡೆಯಲಿದೆ.ಈ ಕುರಿತು ದೇವಾಲಯದ ವತಿಯಿಂದ ಮಾಹಿತಿ ನೀಡಿದ್ದಾರೆ.ಭಕ್ತಾಧಿಗಳು ಚೌತಿ ಆಚರಣೆಯ ದಿನಾಂಕದ ಗೊಂದಲದಲ್ಲಿದ್ದರು.ಸರಕಾರಿ ರಜಾ ಕ್ಯಾಲೆಂಡರ್‌ನಲ್ಲಿ ಸೆ.18ರಂದು ಗಣೇಶ ಚತುರ್ಥಿ ರಜೆ ಎಂದು ಉಲ್ಲೇಖವಾಗಿದ್ದರೆ, ಬಹುತೇಕ ಕ್ಯಾಲೆಂಡರ್‌ಗಳಲ್ಲಿ ಸೆ.19ರಂದೇ ಗಣೇಶ ಚತುರ್ಥಿ ಎಂದು ನಮೂದಿಸಲಾಗಿದೆ. ಸೆ.18ರಂದು ಗಣೇಶ ಚತುರ್ಥಿ ರಜೆ, ಆಚರಣೆಗೆ ಗೊಂದಲವಿತ್ತು.ಇದೀಗ ರಾಜ್ಯದ ಪ್ರಮುಖ ವಿನಾಯಕನ ದೇವಾಲವಾಗಿರುವ ಇಡಗುಂಜಿಯಲ್ಲಿ ಚೌತಿ ಆಚರಣೆ ಸೆಪ್ಟೆಂಬರ್ 19 ರಂದು ಎನ್ನುವ ಮಾಹಿತಿಯಿಂದ ಭಕ್ತಾಧಿಗಳ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ