ಉಪ್ಪೋಣಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ ವಿದ್ಯಾರ್ಥಿಗಳು ಉತ್ತಮ ಸಾಧನೆಯ

ಹೊನ್ನಾವರ: ಇತ್ತೀಚಿಗೆ ನಡೆದ ಉಪ್ಪೋಣಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ ವಿದ್ಯಾರ್ಥಿಗಳು ಉತ್ತಮ ಸಾಧನೆಯ ಮೂಲಕ ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.
ಕಿರಿಯರ ವಿಭಾಗದಲ್ಲಿ ಭೂಮಿಕಾ ಚೇತನ ನಾಯ್ಕ ಇಂಗ್ಲಿಷ್ ಕಂಠಪಾಠ ಮತ್ತು ಕಥೆ ಹೇಳುವುದು ಪ್ರಥಮ, ಆಶ್ವಿಕ್ ರಾಮಚಂದ್ರ ನಾಯ್ಕ ಆಶುಭಾಷಣ ಪ್ರಥಮ, ವಿಶ್ವನಾಥ್ ಗಣಪತಿ ನಾಯ್ಕ ಸಂಸ್ಕೃತ ಧಾರ್ಮಿಕ ಪಠಣ ದ್ವಿತೀಯ, ಚೈತನ್ಯ ರಾಮ ಗೌಡ ಛದ್ಮವೇಶ ದ್ವಿತೀಯ, ಕಾರ್ತಿಕ್ ಸತೀಶ್ ನಾಯ್ಕ ಮಣ್ಣಿನ ಮಾದರಿ ದ್ವಿತೀಯ, ಅದೇ ರೀತಿ ಹಿರಿಯರ ವಿಭಾಗದಲ್ಲಿ ನಂದನ್ ಗಣೇಶ್ ನಾಯ್ಕ ಛದ್ಮವೇಶ ದ್ವಿತೀಯ ಮತ್ತು ಆಶುಭಾಷಣ ತೃತಿಯ ಸ್ಥಾನಗಳನ್ನು ಪಡೆಯುವ ಮೂಲಕ ಎಂಟು ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. ಬಹುಮಾನ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಎಸ್‌ ಡಿ ಎಂ ಸಿ ಅಧ್ಯಕ್ಷರಾದಂತ ಗಣೇಶ್ ರಾಮಯ್ಯ ನಾಯ್ಕ ಮತ್ತು ಎಸ್ ಡಿ ಎಂ ಸಿ ಸದಸ್ಯರು, ಶಾಲೆಯ ಶಿಕ್ಷಕರು, ಊರ ನಾಗರಿಕರು ಅಭಿನಂದನೆ ಸಲ್ಲಿಸಿದರು.