ಭಟ್ಕಳದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಯನ್ನು ಒಗ್ಗೂಡಿಸಲು ಸಾಕ್ಷಿಯಾದ ಲೋಕ ಅದಾಲತ್

ಭಟ್ಕಳ: ದಾಂಪತ್ಯ ಜೀವನದಲ್ಲಿ ಬಿರುಕು ಬಂದು ವಿಚ್ಛೇದನ ಪಡೆಯುವ ಸಲುವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ಭಟ್ಕಳದ ದಂಪತಿಗಳು ಲೋಕ ಅದಾಲತ್‌ನಲ್ಲಿ ಮತ್ತೆ ಒಂದಾದ ಪ್ರಸಂಗ ನಡೆದಿದೆ.

ಭಟ್ಕಳ ಮೂಲದ ದಂಪತಿಗಳು ಪರಸ್ಪರ ಇಬ್ಬರು ಮನಸ್ತಾಪದಿಂದ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು ಆದರೆ ತನಿಖಾ ಹಂತದಲ್ಲಿರುವ ಪ್ರಕರಣವನ್ನು ರಾಜೀ ಮೂಲಕ ಇತ್ಯರ್ಥ ಪಡಿಸಿ ದಂಪತಿಗಳನ್ನು ಒಗ್ಗೂಡಿಸಲು ಲೋಕ್ ಅದಾಲತ್ ಸಾಕ್ಷಿ ಯಾಯಿತಿ

ಕುಟುಂಬಗಳಲ್ಲಿ ಉಂಟಾಗುವ ವೈಮನಸ್ಸುಗಳನ್ನು ಕಟ್ಟು ಕೆಲಸ ಸಾಮಾನ್ಯದಲ್ಲ. ಹಲವು ಕಾರಣಗಳಿಂದ ಘಟಾನುಘಟಿ ದಂಪತಿಗಳ ನಡುವೆ ವ್ಯಾಜ್ಯಗಳು ಉಂಟಾಗಿ ಕೊನೆಗೆ ವಿವಾಹ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಬರುತ್ತಾರೆ. ಎಷ್ಟೋ ಪ್ರಕಣಗಳಲ್ಲಿ ವಿವಾಹ ವಿಚ್ಚೇದನ ಪಡೆದ ಘಟನೆಗಳಿವೆ. ಅದರೇ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿಗಳನ್ನು ಒಂದು ಮಾಡುವ ಮೂಲಕ ಹೊಸಜೀವನಕ್ಕೆ ಮುನ್ನುಡಿ ಬರೆಯುವಂತ ಕೆಲಸಗಳನ್ನು ನ್ಯಾಯಾಧೀಶರು ಮಾಡಿದ್ದಾರೆ.

ಎರಡೂ ಕಡೆಯವರನ್ನು ಮನವೊಲಿಸಿ ಅವರಲ್ಲಿದ್ದ ಪರಸ್ಪರ ಭಿನ್ನಾಭಿಪ್ರಾಯವನ್ನು ದೂರ ಮಾಡಿ ಅವರು ಹಿರಿಯರ ಸಮ್ಮುಖದಲ್ಲಿ ಒಪ್ಪಿ ಒಟ್ಟಾಗಿ ಜೀವನ ನಡೆಸುವುದಾಗಿ ಭರವಸೆ ನೀಡಿ ಪರಸ್ಪರ ಸಿಹಿ ಹಂಚಿಕೊಳ್ಳುವ ಮೂಲಕ ಮತ್ತೆ ಒಂದಾಗಿರುವುದು ನ್ಯಾಯಾಲಯದ ಆವರಣದಲ್ಲಿದ್ದವರಿಗೆಲ್ಲಾ ಸಂತಸ ತಂದಿತ್ತು. ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸಂಧಾನಕಾರರಾಗಿ ನ್ಯಾಯವಾದಿ ನಾಗರತ್ನಾ ನಾಯ್ಕ ಕಾರ್ಯನಿರ್ವಹಿಸಿದರು.