ದಾಂಡೇಲಿ : ನಗರದ ಮರಾಠಾ ಸಮಾಜ ಭವನದಲ್ಲಿ ಕ್ಷತ್ರಿಯ ಮರಾಠಾ ಸಮಾಜದ ವಾರ್ಷಿಕೋತ್ಸವ ಕಾರ್ಯಕ್ರಮವು ಭಾನುವಾರ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್, ವಿಸಿಲಿಂಗ್ ವುಡ್ ರೆಸಾರ್ಟಿನ ಮಾಲಕರಾದ ವಿನಾಯಕ ಜಾಧವ್ ಭಾಗವಹಿಸಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುವ ಮೂಲಕ ಶೈಕ್ಷಣಿಕವಾಗಿ ಸಮಾಜದ ಮುಖ್ಯ ಭೂಮಿಗೆ ಸಮಾಜ ಬಾಂಧವರು ಬರಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಮೋಹನ ಪಾಟೀಲ್ ಅವರು ವಹಿಸಿ, ಸಮಾಜದ ಪ್ರಗತಿಗೆ ಸಮಾಜ ಬಾಂಧವರು ಒಂದಾಗಿ ಸಹಕರಿಸುವ ಮೂಲಕ ಸಮಾಜದ ಅಭಿನಯಕ್ಕೆ ಸಹಕರಿಸುತ್ತಿರುವುದು ಅತ್ಯಂತ ಸಂತಸದ ವಿಚಾರ. ಇದೇ ರೀತಿ ಮುಂದಿನ ದಿನಗಳಲ್ಲಿಯೂ ಸಹಕಾರ ಇರಲೆಂದು ಕೋರಿದರು.
ವೇದಿಕೆಯಲ್ಲಿ ಕ್ಷತ್ರಿಯ ಮರಾಠಾ ಸಮಾಜದ ಪ್ರಮುಖ ಪದಾಧಿಕಾರಿಗಳಾದ ಕಿಸಾನ್ ಇಂಗೋಲೆ, ಮಹೇಶ್ ಸಾವಂತ, ಚಂದ್ರಕಾಂತ ಮಿರಾಶಿ, ಸಂದೀಪ್ ನಾಯ್ಕ, ಸುನೀಲ ಸೋಮನಾಚೆ, ವಿಠ್ಠಲ್ ಸಿದ್ದಾನಿ, ನಾಗರಾಜ್ ಮಿರಾಶಿ, ವಿದ್ಯಾ ಪಾಟೀಲ್, ಮಂಜುಳಾ ನಾಕಾಡಿ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಷತ್ರಿಯ ಮರಾಠಾ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.