ಹೊನ್ನಾವರ: ತಾಲೂಕಿನ ಮಂಕಿ ದೇವರಗದ್ದೆಯಲ್ಲಿ ಹೊನ್ನಾವರ ಸಂತ ಇಗ್ನೇಶಿಯಸ್ ನರ್ಸಿಂಗ್ ಕಾಲೇಜು ಎನ್.ಎಸ್.ಎಸ್ ಘಟಕ ಮತ್ತು ಸಂತ್ ಇಗ್ನೇಶಿಯಸ್ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಹಾಗೂ ಯುನಿಸೆಫ್ ನೇತೃತ್ವದಲ್ಲಿ ಸಾರ್ವತ್ರಿಕ ಲಸಿಕಾಕರಣ ಜಾಗೃತಿ ಜಾತಾಕ್ಕೆ ಚಾಲನೆ ನೀಡಲಾಯಿತು.
ಸಂತ ಇಗ್ನೇಶಿಯಸ್ ನರ್ಸಿಂಗ್ ಶಾಲೆಯ ವಿದ್ಯಾರ್ಥಿಗಳು ಲಸಿಕೆ ಮಹತ್ವದ ಕುರಿತು ಬೀದಿ ನಾಟಕ ಪ್ರದರ್ಶಿಸಿದರು. ನಂತರ ದೇವರಗದ್ದೆಯಿಂದ ತಾಳಮಕ್ಕಿವರೆಗೆ ಲಸಿಕಾಕರಣದ ಬಗ್ಗೆ ಪ್ರತಿ ಮನೆ ಸಂದರ್ಶಿಸಿ ಕರಪತ್ರ ಕೊಟ್ಟು ಜನರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಸಂತ ಇಗ್ನೇಶಿಯಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಸುಜೈ, ಯೋಜನಾಧಿಕಾರಿ ಅಂತೋನಿ ಲೋಪೀಸ್, ಸಂಪನ್ಮೂಲ ವ್ಯಕ್ತಿಗಳಾದ ಅಣ್ಣಪ್ಪನಾಯ್ಕ್ ತಾಳಮಕ್ಕಿ, ಆಶಾ ಕಾರ್ಯಕರ್ತೆ ಗಂಗೆ ಖಾರ್ವಿ, ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ್ ಖಾರ್ವಿ, ಸ್ಥಳೀಯ ಮುಖಂಡರು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.