ಹೊಸಳ್ಳಿ ಗ್ರಾಮಕ್ಕೆ ಬಸ್‌ ಬಿಡುವಂತೆ ಮನವಿ ಸಲ್ಲಿಸಿದ ಸಂಘಟನೆಗಳು

ಯಲ್ಲಾಪುರ: ತಾಲೂಕಿನ ಹೊಸಳ್ಳಿಯಿಂದ ಕಾರವಾರಕ್ಕೆ ಕೆಲ ದಿನಗಳಿಂದ ಬಸ್ ಓಡಿಸುತ್ತಿದ್ದು, ಅದನ್ನು ಪ್ರತಿದಿನ ಸಮರ್ಪಕವಾಗಿ ಓಡಾಡುವಂತೆ ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿಯ ಅಲ್ಪಸಂಖ್ಯಾತ ಘಟಕ ಹಾಗೂ ಜಯ ಭಾರತ ಸಂಘಟನೆಯ ವತಿಯಿಂದ ಗುರುವಾರ ಪಟ್ಡಣದಲ್ಲಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಹುಬ್ಬಳ್ಳಿಯ ಕಡೆಯಿಂದ ಬಸ್ ಇದ್ದರೂ,ನಿಲುಗಡೆ ಇಲ್ಲದೇ ಸಮಸ್ಯೆ ಆಗಿತ್ತು. ಇದಕ್ಕೆ ಸ್ಪಂದಿಸಿ ಕಳೆದ ಹದಿನೈದು ದಿನಗಳಿಂದ ಬಸ್ ಬಿಡುತ್ತಿದ್ದು, ಅದನ್ನು ಖಾಯಂ ಆಗಿ ಬಿಡದೇ ಇರುವುದರಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನಾನುಕೂಲವಾಗಿದೆ.
ಮುಖ್ಯವಾಗಿ ಬೆಳಗ್ಗೆ 7.45 ರಿಂದ 8.45 ರ ಅವಧಿಯಲ್ಲಿ ಹೊಸಳ್ಳಿ,ಯಲ್ಲಾಪುರ, ಇಡಗುಂದಿ, ಅರಬೈಲ್, ಸುಂಕಸಾಳ, ಹಿಲ್ಲೂರು ಕ್ರಾಸ್, ಅಗಸೂರು ಮುಂತಾದ ಗ್ರಾಮೀಣ ಭಾಗದಲ್ಲಿ ಬಸ್ ನಿಲುಗಡೆ ನೀಡಿದರೆ ಜನರಿಗೆ ಅನುಕೂಲ ಆಗಲಿದೆ. ಹಾಗಾಗಿ ಈ ಬಸ್ ನ್ನು ಖಾಯಂ ಓಡಿಸಬೇಕೆಂದು ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದರು.
ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಹಮ್ಮದ್ ಎಚ್ ಕೋಳಿಕೇರಿ, ಸಂಘಟನೆಯ ಪ್ರಮುಖರಾದ ರಾಘವೇಂದ್ರ ಮಂಗಳಿ, ಮಹೇಶ ವಿ ದಿಂಡವಾರ, ಮೌಲಾಲಿ ಪಾಟೀಲ್, ಮಹಮ್ಮದ್ ಅಲಿ ಬಮ್ಮಿಕಟ್ಟಿ, ದತ್ತಾತ್ರೇಯ ಹೇಂದ್ರೆ, ಯಾಸಿನ್ ಚೌದರಿ ಇದ್ದರು.