ಸಿದ್ದಾಪುರ : ಆಯುಷ್ ಪಾಲಿ ಕ್ಲಿನಿಕ್ ಮತ್ತು ಆಯುಷ್ ಮೆಡಿಕಲ್ ಸಿದ್ದಾಪುರ ಇವರ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಸಿದ್ದಾಪುರ : ಆಯುಷ್ ಪಾಲಿ ಕ್ಲಿನಿಕ್ ಮತ್ತು ಆಯುಷ್ ಮೆಡಿಕಲ್ ಸಿದ್ದಾಪುರ ಇವರ ಆಶ್ರಯದಲ್ಲಿ ಪಟ್ಟಣದ ಬಾಲ ಭವನದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿ ಜನರು ಆರೋಗ್ಯದ ಕಡೆ ಗಮನಹರಿಸಿ ಆಗಾಗ ತಪಾಸಣೆ ನಡೆಸಿಕೊಂಡು ಚಿಕಿತ್ಸೆ ಪಡೆದುಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ರೀತಿಯ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ತುಂಬಾ ಸಹಕಾರಿಯಾಗಿದೆ ಸಂಘಟಕರ ಕಾರ್ಯ ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ವೆಂಕಟೇಶ್ ಹೆಗಡೆ, ವಸಂತ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವೈದ್ಯರುಗಳು ತಪಾಸಣೆ ಗೆ ಬಂದ ರೋಗಿಗಳ ಅರೋಗ್ಯ ತಪಾಸಣೆ ನಡೆಸಿ ಸಲಹೆ ನೀಡಿದರು.