ವಿಶ್ವ ಸಂಸ್ಕೃತ ದಿನದ ಅಂಗವಾಗಿ ಪತಂಜಲಿ ಯೋಗ ಸಮಿತಿ ಇವರ ಆಶ್ರಯದಲ್ಲಿ ಸಂಸ್ಕೃತ ಭಾಷೆಯ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮ

ಯಲ್ಲಾಪುರ :ವಿಶ್ವ ಸಂಸ್ಕೃತ ದಿನದ ಅಂಗವಾಗಿ ಪತಂಜಲಿ ಯೋಗ ಸಮಿತಿ ಇವರ ಆಶ್ರಯದಲ್ಲಿ ಯಲ್ಲಾಪುರ ಪಟ್ಟಣದ ಅಡಿಕೆ ಭವನದಲ್ಲಿ ಬುಧವಾರ ಸಂಸ್ಕೃತ ಭಾಷೆಯ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಶಾರದಾಂಬಾ ಸಂಸ್ಕೃತ ಪಾಠ ಶಾಲೆಯ ಆಧ್ಯಾಪಕ ರಾಮನಾಥ ಭಟ್ಟ ಸಂಸ್ಕೃತ ಭಾಷೆಯ ಮಹತ್ವ ಪ್ರಾಚೀನತೆ ಹಾಗೂ ವಿಶೇಷ ಕುರಿತಂತೆ ಉಪನ್ಯಾಸವನ್ನು ನೀಡಿ,”ಸಂಸ್ಕೃತ ಭಾಷೆ ದೇವ ಭಾಷೆಯಾಗಿದ್ದು ವಿಶೇಷವಾಗಿ ರಚನೆ ಮಾಡಲ್ಪಟ್ಟಂತಹ ವಿಶಿಷ್ಟ ಭಾಷೆಯಾಗಿದೆ. ಎಲ್ಲಾ ಪ್ರದೇಶಗಳಲ್ಲಿಯೂ ಯಾವುದೇ ಬದಲಾವಣೆಯನ್ನ ಹೊಂದದೆ ಉಚ್ಚರಿಸಲ್ಪಡುವ ಏಕಮೇವ ಭಾಷೆ ಎಂದರೆ ಅದು ಸಂಸ್ಕೃತವಾಗಿದೆ” ಎಂದರು.
ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ವಿಕೆ ಭಟ್ಟ ಶಿಗೆಪಾಲ್ , ಉಪಾಧ್ಯಕ್ಷ ನಾಗೇಶ ರಾಯ್ಕರ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವಿ ಹೆಗಡೆ ಪತಂಜಲಿ ಜಿಲ್ಲಾ ಯುವ ಭಾರತ ಪ್ರಭಾರಿ ಶಿಕ್ಷಕ ದಿವಾಕರ ಮರಾಠಿ, ಜಿಲ್ಲಾ ಯೋಗ ವಿಸ್ತಾರಕ ಸುಬ್ರಾಯ ಭಟ್ಟ,ಸಹ ಪ್ರಭಾರಿ ಕನಕಪ್ಪ, ಶ್ರೀಪಾದ ಭಟ್ಟ ಸದಾನಂದ ನಾಯ್ಕ, ಮಂಜುನಾಥ ಹೆಗಡೆ ಗಂಗಾ ಭಟ್ಟ ಮುಂತಾದವರು ಇದ್ದರು.