ಶಿರಸಿ : ರಿಪೇರಿಗೆ ಬಂದ ಟಿ.ವಿಯಲ್ಲಿ ಗೋದಿ ಬಣ್ಣದ ಹಾವು

ಶಿರಸಿ : ರಿಪೇರಿಗೆ ಬಂದ ಟಿ.ವಿ ಯನ್ನು ರಿಪೇರಿಯಾತ ಅಂಗಡಿಯಲ್ಲಿ ಬಿಚ್ಚುತ್ತಿರುವ ವೇಳೆ ಟಿ.ವಿ ಬೋರ್ಡ್ ನಲ್ಲಿ ಗೋದಿ ಬಣ್ಣದ ಹಾವು ಕಂಡಿದ್ದು ಟಿ.ವಿ ರಿಪೇರಿಯಾತ ಗಾಬರಿಗೊಂಡ ಘಟನೆ ಶಿರಸಿ ಪಟ್ಟಣದಲ್ಲಿ ನಡೆದಿದೆ. ಕುಮಟಾ ಮುಖ್ಯ ರಸ್ತೆಯಲ್ಲಿನ ನಿಲೇಕಣಿ ಅಗಸೆಬಾಗಿಲು ಮದ್ಯ ಭಾಗದಲ್ಲಿರುವ ರವೀಶ್ ಎಲೆಟ್ರಾನಿಕ್ಸ್ ಮಾಲೀಕ ರವೀಶ್ ಎನ್ನುವ ವ್ಯಕ್ತಿ ರಿಪೇರಿಗೆ ಟಿ. ವಿ ಬಿಚ್ಚಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಗ್ರಾಹಕರು ರಿಪೇರಿಗೆ ಎಂದು ನೀಡಿದ್ದ ಟಿವಿಯನ್ನು ಬಿಚ್ಚಿ ಒಳ ಭಾಗ ತೆರೆದು ನೋಡಿದಾಗ ಗೋದಿ ಬಣ್ಣದ ಹಾವು ಅದರಲ್ಲಿರುವುದು ಕಂಡುಬಂದಿದೆ. ಕೂಡಲೇ ಗಾಬರಿಗೊಂಡ ಆತನು ಕುಳಿತಳಿಂದ ಎದ್ದು ದೂರದಲ್ಲಿ ನಿಂತು ನೋಡಿದ್ದಾನೆ ಅದು ಓಡಾಡದೆ ಇರುವುದನ್ನ ಗಮನಿಸಿ ಮೃತಪಟ್ಟಿರುವದನ್ನು ತಿಳಿದು ಅದನ್ನ ಹೊರಹಾಕಿ ಟಿವಿ ರಿಪೇರಿ ಮಾಡಿದ ಘಟನೆ ನಡೆದಿದೆ.