ಜಿ+2 ಆಶ್ರಯ ಮನೆ ವಿತರಣೆಗೆ ಕೂಡಲೆ ಕ್ರಮ ಕೈಗೊಳ್ಳುವಂತೆ ವಿಷ್ಣು ನಾಯರ್ ಆಗ್ರಹ

ದಾಂಡೇಲಿ : ಅಂಬೇವಾಡಿಯಲ್ಲಿ ನಿರ್ಮಾಣವಾಗುತ್ತಿರುವ ಜಿ+2 ಆಶ್ರಯ ಮನೆಗಳ ನಿರ್ಮಾಣ ಕಾರ್ಯವನ್ನು ಶೀಘ್ರ ಮುಗಿಸಿ, ಕೂಡಲೆ ಸಂಬಂಧಿಸಿದ ಫಲಾನುಭವಿಗಳಿಗೆ ಮನೆಗಳ ವಿತರಣೆಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ನಗರದ ಅಟಲ್ ಅಭಿಮಾನಿ ಸಂಘಟನೆಯ ಅಧ್ಯಕ್ಷರಾದ ವಿಷ್ಣು ನಾಯರ್ ಅವರು ಆಗ್ರಹಿಸಿದ್ದಾರೆ.

ಅವರು ಭಾನುವಾರ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ, ಈ ಬಾರಿಯ ವಿಧಾನ ಸಭಾ ಚುನಾವಣೆಯ ಮುನ್ನ ಶಾಸಕರಾದ ಆರ್.ವಿ.ದೇಶಪಾಂಡೆಯವರು ಸ್ವಲ್ಪ ಫಲಾನುಭವಿಗಳಿಗೆ ಆಶ್ರಯ ಮನೆ ಮಂಜೂರಾತಿ ಪತ್ರ ನೀಡಿ, ಮನೆಗಳ ವಿತರಣೆ ಶೀಘ್ರ ಮಾಡಲಾಗುವುದೆಂದು ಹೇಳಿದ್ದರು. ಆದರೆ ಜನರಿಗೆ ಭರವಸೆ ನೀಡಿ ಆರೇಳು ತಿಂಗಳಾದರೂ ಆಶ್ರಯ ಮನೆಗಳ ವಿತರಣೆಗೆ ಮುಂದಾಗಿಲ್ಲ. ಆದ್ದರಿಂದ ಶಾಸಕರು ಹಾಗೂ ನಗರಾಡಳಿತ ಕೂಡಲೆ ಆಶ್ರಯ ಮನೆಗಳ ವಿತರಣೆಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ವಿಷ್ಣು ನಾಯರ್ ಅವರು ಆಗ್ರಹಿಸಿದ್ದಾರೆ.