ಕಾರವಾರ: ನಗರದ ರಾಷ್ಟ್ರೀಯ ಹೆದ್ದಾರಿ 66ರ ಅರಗಾದ ಕದಂಬ ನೌಕಾನೆಲೆಯಿಂದ ದಾಖಲೆ ರಹಿತವಾಗಿ ಜಾನುವಾರು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಲಾರಿ ಸಮೇತ ಚಾಲಕ ಹಾಗೂ 18 ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅರಗಾದ ಕದಂಬ ನೌಕಾನೆಲೆಯಿಂದ ದೊಡ್ಡ ಟ್ರಕ್ ಮೂಲಕ ಹುಬ್ಬಳ್ಳಿ ಮಾರ್ಗವಾಗಿ ಜಾನುವಾರು ಸಾಗಿಸುತ್ತಿದ್ದಾಗ, ಸ್ಥಳೀಯರು ಪರಿಶೀಲಿಸಿದ್ದಾರೆ. ಈ ವೇಳೆ ಚಾಲಕ ಯಾವುದೇ ದಾಖಲೆ ನೀಡದ ಹಿನ್ನೆಲೆಯಲ್ಲಿ ಚಾಲಕನನ್ನು ಲಾರಿ ಸಮೇತ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಲ್ಬುರ್ಗಿ ಭಾಗದ ಗೋಶಾಲೆಗೆ ಜಾನುವಾರುಗಳನ್ನು ಕೊಂಡೊಯ್ಯುತ್ತಿರುವುದಾಗಿ ಚಾಲಕ ಹೇಳಿದ್ದಾನೆ. ಆದರೆ, ಗೋಶಾಲೆಗೆ ಸಾಗಿಸುವ ಯಾವುದೇ ದಾಖಲೆ ನೀಡದ ಹಿನ್ನೆಲೆಯಲ್ಲಿ ಲಾರಿ ಸಮೇತ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.