ಹೊನ್ನಾವರ : ಟಯರ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ನಾಲ್ಕು ಲಕ್ಷಕೂ ಅಧಿಕ ಮೌಲ್ಯದ ಟಯರ್ ಸುಟ್ಟು ಕರಕಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣ ಸರ್ಕಲ್ ಬಳಿ ನೆಡೆದಿದೆ.
ಪ್ರಕಾಶ ಗೌಡ ಎಂಬುವರಿಗೆ ಸೇರಿದ ಟಯರ್ ಅಂಗಡಿ ಇದಾಗಿದ್ದು ವಿವಿಧ ವಾಹನದ ಟಯರ್ ಗಳನ್ನು ಮಾರಾಟ ಮಾಡುವ ಮಳಿಗೆ ಇದಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಜರಾಗಿ ಬೆಂಕಿ ನಂದಿಸಿದರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.