ಕುಮಟಾ : ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇತ್ತಿಚಿಗೆ ಕುಮಟಾದ ಮಣಕಿ ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿಯನ್ನು ಗಳಿಸುವುದರೊಂದಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗುವುದರ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಬಾಲಕಿಯರ ವಿಭಾಗದ ಗುಂಪು ಆಟದಲ್ಲಿ ಕಬ್ಬಡಿ ಪ್ರಥಮ ಸ್ಥಾನ, ಶಟಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ, 4×400ಮೀ. ರೀಲೆ ಪ್ರಥಮ, 4×100ಮೀ. ರೀಲೆ ದ್ವೀತಿಯ ಸ್ಥಾನ, ವಾಲಿಬಾಲ್ ದ್ವೀತಿಯ ಸ್ಥಾನ, ಥ್ರೋ ಬಾಲ್ ದ್ವೀತಿಯ ಸ್ಥಾನ ಪಡೆದಿರುತ್ತಾರೆ.
ವೈಯಕ್ತಿಕ ಆಟದಲ್ಲಿ ಕು. ಚಾರ್ವಿ ಗುಂಡು ಎಸೆತ ಪ್ರಥಮ ಸ್ಥಾನ, ಸರಪಳಿ ಎಸೆತ ದ್ವೀತಿಯ ಸ್ಥಾನ ಮತ್ತು ಚಕ್ರ ಎಸೆತದಲ್ಲಿ ದ್ವೀತಿಯ ಸ್ಥಾನ ಗಳಿಸಿರುತ್ತಾಳೆ. ಕು. ಅಕ್ಷತಾ ಈಜು ಸ್ಪರ್ಧೆಯ 50ಮೀ. ಹಾಗೂ 100ಮೀ. ಪ್ರೀಸ್ಟೈಲ್ ಎರಡರಲ್ಲೂ ಪ್ರಥಮ ಸ್ಥಾನ, ಕು. ಸಿಂಚನಾ ಯೋಗದಲ್ಲಿ ಪ್ರಥಮ ಸ್ಥಾನ ಮತ್ತು ತ್ರಿವಿಧ ಜಿಗಿತದಲ್ಲಿ ದ್ವೀತಿಯ ಸ್ಥಾನ, ಕು. ಅಪೇಕ್ಷಾ 800ಮೀ. ಓಟದಲ್ಲಿ ಪ್ರಥಮ ಸ್ಥಾನ, ಕು. ಶ್ರೇಯಾ ಈಜು ಸ್ಪರ್ಧೆಯ 50ಮೀ. ಹಾಗೂ 100ಮೀ. ಪ್ರೀಸ್ಟೈಲ್ ಎರಡರಲ್ಲೂ ದ್ವೀತಿಯ ಸ್ಥಾನ, ಕು. ಉಮ್ಮಾಹೆನಿ 400ಮೀ. ಓಟದಲ್ಲಿ ದ್ವೀತಿಯ ಸ್ಥಾನ, ಹಾಗೂ ಕು. ಪ್ರಣವ್ಯಾ ಚೆಸ್ ನಲ್ಲಿ ತೃತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದ ಗುಂಪು ಆಟದಲ್ಲಿ ಶಟಲ್ ಬ್ಯಾಡ್ಮಿಂಟನ್ ಪ್ರಥಮ ಸ್ಥಾನ, ಟೇಬಲ್ ಟೆನ್ನಿಸ್ ಪ್ರಥಮ ಸ್ಥಾನ, ಈಜು ಸ್ಪರ್ಧೆಯ 4×100ಮೀ. ಪ್ರೀಸ್ಟೈಲ್ ರೀಲೆ ಪ್ರಥಮ, ಕಬ್ಬಡಿ ದ್ವೀತಿಯ ಸ್ಥಾನ, 4×400ಮೀ. ರೀಲೆ ದ್ವೀತಿಯ ಸ್ಥಾನ, 4×100ಮೀ. ರೀಲೆ ದ್ವೀತಿಯ ಸ್ಥಾನ ಪಡೆದಿರುತ್ತಾರೆ.
ವೈಯಕ್ತಿಕ ಆಟದಲ್ಲಿ ಕು. ಸ್ವಯಂ ಈಜು ಸ್ಪರ್ಧೆಯ 50ಮೀ. ಪ್ರೀಸ್ಟೈಲ್, 100ಮೀ. ಪ್ರೀಸ್ಟೈಲ್ ಮತ್ತು 50ಮೀ. ಬ್ರೆಸ್ಟ್ರೋಕ್ ಈ ಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾನೆ. ಕು. ಚರಣ್ 400ಮೀ. ಓಟದಲ್ಲಿ ಪ್ರಥಮ ಮತ್ತು ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ, ಕು. ರಾಘವೇಂದ್ರ ಈಜು ಸ್ಪರ್ಧೆಯ 200ಮೀ. ಪ್ರೀಸ್ಟೈಲ್ ಪ್ರಥಮ, 50ಮೀ. ಪ್ರೀಸ್ಟೈಲ್ ದ್ವೀತಿಯ ಮತ್ತು 100ಮೀ. ಪ್ರೀಸ್ಟೈಲ್ ನಲ್ಲಿ ದ್ವೀತಿಯ ಸ್ಥಾನ, ಕು. ಆದಿತ್ಯ ಉದ್ದ ಜಿಗಿತ ಪ್ರಥಮ ಮತ್ತು 400ಮೀ. ಓಟದಲ್ಲಿ ದ್ವಿತೀಯ ಸ್ಥಾನ, ಕು. ಶ್ರೀಕೃಷ್ಣ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ, ಕು. ಗಣೇಶ ಗುಂಡು ಎಸೆತ ಪ್ರಥಮ ಸ್ಥಾನ, ಕು. ಸಮರ್ಥ ಉದ್ದ ಜಿಗಿತ ದ್ವೀತಿಯ ಸ್ಥಾನ, ಕು. ಕರಣ್ ಚಕ್ರ ಎಸೆತ ದ್ವೀತಿಯ ಸ್ಥಾನ, ಕು. ಪ್ರಥ್ವೀಶ ಚೆಸ್ ನಲ್ಲಿ ದ್ವೀತಿಯ ಸ್ಥಾನ, ಕು. ಆರ್ಯನ್ ಗುಂಡು ಎಸೆತ ತೃತೀಯ ಸ್ಥಾನ, ಕು. ಕಾರ್ತಿಕ ಸರಪಳಿ ಎಸೆತ ತೃತೀಯ ಸ್ಥಾನ, ಕು. ಅತುಲ್ 800ಮೀ. ತೃತೀಯ ಸ್ಥಾನ, ಕು. ಭುವನ್ ಚೆಸ್ ನಲ್ಲಿ ತೃತೀಯ ಸ್ಥಾನ ಗಳಿಸುವುದರ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಮಕ್ಕಳ ಈ ಅಮೋಘ ಸಾಧನೆಗೆ ಕೊಂಕಣ ಎಜುಕೇಶನ್ ಟ್ರಸ್ಟ್ ನ ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಶ್ರೀ. ಗುರುರಾಜ ಶೆಟ್ಟಿಯವರು, ಪ್ರಾಂಶುಪಾಲರಾದ ಶ್ರೀ. ಕಿರಣ ಭಟ್ಟ, ಉಪಪ್ರಾಂಶುಪಾಲರಾದ ಶ್ರೀಮತಿ. ಸುಜಾತಾ ಹೆಗಡೆ, ಕ್ರೀಡಾ ಸಂಯೋಜಕರಾದ ಶ್ರೀ. ಪದ್ಮನಾಭ ಪ್ರಭು, ಕ್ರೀಡಾ ಸಹ ಸಂಯೋಜಕರಾದ ಶ್ರೀ. ಅವಿನಾಶ ಅಮ್ಮನಗಿ, ಕ್ರೀಡಾ ಸಹ ಸಂಯೋಜಕರಾದ ಶ್ರೀಮತಿ ತ್ರಿವೇಣಿ ನಾಯ್ಕ, ದೈಹಿಕ ಶಿಕ್ಷಕರುಗಳಾದ ಶ್ರೀ. ದಿವಾಕರ ನಾಯ್ಕ, ಶ್ರೀ. ಜಯರಾಜ ಶೇರೆಗಾರ, ಶ್ರೀ. ನಾಗರಾಜ ಗೌಡ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹರ್ಷವನ್ನು ವ್ಯಕ್ತಪಡಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.