ದಂಡಕಾರಣ್ಯ ಉದ್ಯಾನವನದ ಪ್ರಗತಿ ಹಾಗೂ ಅಭಿವೃದ್ದಿ ಕಾರ್ಯಗಳ ಬಗ್ಗೆ ಸಭೆ

ದಾಂಡೇಲಿ : ನಗರದ ದಂಡಕಾರಣ್ಯ ಇಕೋ ಪಾರ್ಕಿನಲ್ಲಿ ದಂಡಕಾರಣ್ಯ ಉದ್ಯಾನವನ ಅಭಿವೃದ್ದಿ ಸಮಿತಿ ಸಭೆಯು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ಎಚ್.ಬಾಲಚಂದ್ರ ಅವರ ಅಧ್ಯಕ್ಷತೆಯಲ್ಲಿ ಇಂದು ಗುರುವಾರ ಜರುಗಿತು.

ಸಭೆಯಲ್ಲಿ ದಂಡಕಾರಣ್ಯ ಇಕೋ ಪಾರ್ಕ್ ನಿರ್ವಹಣೆ ಸೇರಿದಂತೆ ಇನ್ನಿತರ ಖರ್ಚು ವೆಚ್ಚಗಳ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ದಂಡಕಾರಣ್ಯ ಇಕೋ ಪಾರ್ಕಿಗೆ ಜಿಪ್ ಲೈನ್ ನಿರ್ಮಾಣ, ವಿವಿಧ ಆಟೋಟಗಳ ವ್ಯವಸ್ಥೆಯನ್ನು ಅಳವಡಿಕೆ, ಸಿಬ್ಬಂದಿಗಳ ವೇತನ ಪರಿಷ್ಕರಣಿಯ ಬಗ್ಗೆ ಚರ್ಚೆ ನಡೆಯಿತು.

ಸಭೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ.ಶೇಠ್, ವಲಯಾರಣ್ಯಾಧಿಕಾರಿಗಳಾದ ಅಪ್ಪರಾವ್ ಕಲಶೆಟ್ಟಿ, ಸಂಗಮೇಶ್ ಪಾಟೀಲ್, ಡಿ.ಆರ್.ಎಫ್.ಓ ಸಂದೀಪ್ ನಾಯ್ಕ, ಅರಣ್ಯ ಇಲಾಖೆಯ ಗಜಾನನ ಕರಗಾಂವಕರ, ನಗರ ಸಭೆಯ ವ್ಯವಸ್ಥಾಪಕರಾದ ಪರಶುರಾಮ ಗಸ್ತೆ, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿ, ಸಮಿತಿಯ ಸದಸ್ಯರುಗಳಾದ ಯು.ಎಸ್.ಪಾಟೀಲ್, ಯಾಸ್ಮಿನ್ ಕಿತ್ತೂರ್, ಮೋಹನ ಹಲವಾಯಿ, ರಾಹುಲ್ ಬಾವಾಜಿ, ಕೀರ್ತಿ ಗಾಂವಕರ್, ಅನಿಲ್ ದಂಡಗಲ್, ಇಲಿಯಾಸ್ ಕಾಟಿ, ದಂಡಕಾರಣ್ಯ ಇಕೋ‌ ಪಾರ್ಕಿನ ಮೇಲ್ವಿಚಾರಕ ದೀಪಕ್ ಗಾವಾಡೆ ಮೊದಲಾದವರು ಉಪಸ್ಥಿತರಿದ್ದರು.