ಸಿದ್ದಾಪುರ :ಸುದೃಢವಾದ ದೇಹವನ್ನು ಹೊಂದಲು ಕ್ರೀಡಾ ಚಟುವಟಿಕೆ ಅತಿ ಅವಶ್ಯಕ – ಬಿ.ಇ.ಒ. ಜಿ ಐ ನಾಯ್ಕ್

ಸಿದ್ದಾಪುರ : ದೈಹಿಕ ಮತ್ತು ಮಾನಸಿಕ ಸಮರ್ಥತೆ, ದಕ್ಷತೆ, ಏಕಾಗ್ರತೆ ಇವೆಲ್ಲವೂ ಸಿಗಬೇಕಾದರೆ ನಾವು ಕ್ರೀಡಾಕೂಟ ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ಇಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯವಾಗಿದೆ, ಸುದೃಢವಾದ ದೇಹವನ್ನು ಹೊಂದಲು ಕ್ರೀಡಾ ಚಟುವಟಿಕೆ ಅತಿ ಅವಶ್ಯಕ ಎಂದು ಬಿ. ಇ. ಒ. ಜಿ ಐ ನಾಯ್ಕ್ ಹೇಳಿದರು ಅವರು ತಾಲೂಕಿನ ಲಂಬಾಪುರ ಸಮೀಪದ ಗಿಳಸೆ ಮೈದಾನದಲ್ಲಿ ರಾಮೇಶ್ವರ ಪ್ರೌಢಶಾಲೆ ಇಟಗಿ ಇವರ ವತಿಯಿಂದ ಆಯೋಜಿಸಿದ ಬಿಳಗಿ ವಲಯ ಮಟ್ಟದ 2023-24ನೇ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಪ್ರಸಾರಕ ಸಮಿತಿಯ ಗೌರವ ಅಧ್ಯಕ್ಷ ಕೆ ಐ ಹೆಗಡೆ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಗಿರಿಜಾ ಲೋಕೇಶ್ ನಾಯ್ಕ್ ಅಧ್ಯಕ್ಷರು ಇಟಗಿ ಗ್ರಾಮ ಪಂಚಾಯತ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಇಟಗಿ ಪಂಚಾಯತ್ ಉಪಾಧ್ಯಕ್ಷ ರಾಮಚಂದ್ರ ನಾಯ್ಕ್ ವಾಜಗೋಡ ಪಂಚಾಯತ್ ಅಧ್ಯಕ್ಷೆ ಸರಸ್ವತಿ ಗೌಡ, ಸದಸ್ಯರು ಗಳಾದ ಮಹೇಶ್ ನಾಯ್ಕ್ ವೆಂಕಟರಮಣ ನಾಯ್ಕ್ ಕೃಷ್ಣಮೂರ್ತಿ ಐಸೂರ್ ,ತಾ ಪಂ ಮಾಜಿ ಅಧ್ಯಕ್ಷ ಸಿ ಆರ್ ನಾಯ್ಕ್, ಇಟಗಿ ಗ್ರಾಮ ಪಂಚಾಯತ ನಿಕಟಪೂರ್ವ ಅಧ್ಯಕ್ಷ ಸುರೇಂದ್ರ ಗೌಡ,ನಿವೃತ್ತ ಶಿಕ್ಷಕ ಎಲ್ ಜಿ ನಾಯ್ಕ್ ಸಂಪಖಂಡ , ಲಿಂಗಪ್ಪ ನಾಯ್ಕ್, ಮತ್ತಿತರರು ಉಪಸ್ಥಿತರಿದ್ದರು ಇಟಗಿ ಹೈ ಸ್ಕೂಲ್ ಮುಕ್ಯೋಧ್ಯಾಪಕ ಡಿ. ಜಿ. ಪೂಜಾರಿ ಸ್ವಾಗತಿಸಿದರು , ಆರ್ ಟಿ ಭಟ್ ನಿರೂಪಿಸಿದರು ಭಾಸ್ಕರ್ ಭಟ್ ವಂದಿಸಿದರು.
ಬುಧವಾರ ಮತ್ತು ಗುರುವಾರದಂದು ಕ್ರೀಡಾಕೂಟಗಳು ನಡೆಯಲಿದ್ದು ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಜ್ಞಾವಿಧಿ ಭೋದಿಸಲಾಯಿತು ಸಭಾ ಕಾರ್ಯಕ್ರಮದ ನಂತರ ವಿವಿಧ ಕ್ರೀಡಾ ಚಟುವಟಿಕೆಗಳು ಆರಂಭಗೊಂಡವು.