ಸಿದ್ದಾಪುರ : ರಾಜ್ಯದಲ್ಲಿ ಪ್ರಸಿದ್ದಿ ಪಡೆದ ಉಂಚಳ್ಳಿ ಜಲಪಾತ ಕ್ಕೆ ಹೆಗ್ಗರಣಿಯಿಂದ ಸಂಪರ್ಕ ನೀಡುವ ರಸ್ತೆಯಲ್ಲಿ ಹೊಂಡಗಳು ಬಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು, ಈ ಹೊಂಡಗಳಿಗೆ ಮಣ್ಣು ತುಂಬುವ ಮೂಲಕ ಉಂಚಳ್ಳಿ ಗ್ರಾಮಸ್ಥರು ವಾಹನ ಸವಾರರಿಗೆ ಅನುಕೂಲ ಮಾಡಿಕೊಡುವುದರೊಂದಿಗೆ ಗಮನ ಸೆಳೆದಿದ್ದಾರೆ.
ತಾಲೂಕಿನಲ್ಲಿರುವ ಜಲಪಾತಗಳಲ್ಲಿ ಉಂಚಳ್ಳಿ ಜಲಪಾತವು ರಾಜ್ಯದಲ್ಲಿಯೇ ಹೆಚ್ಚು ಪ್ರಸಿದ್ಧಿಯನ್ನು ಹೊಂದಿದ್ದು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಿರುತ್ತದೆ, ಆದರೆ ರಸ್ತೆಗಳಲ್ಲಿ ಹೊಂಡ ಬಿದ್ದಿರುವ ಕಾರಣದಿಂದಾಗಿ ಪ್ರವಾಸಿಗರಿಗೆ ಮತ್ತು ಸ್ಥಳೀಯ ಸಾರ್ವಜನಿಕರಿಗೆ ರಸ್ತೆಯಲ್ಲಿ ಓಡಾಡುವುದಕ್ಕೆ ಹಲವಾರು ರೀತಿಯ ತೊಂದರೆಗಳು ಉಂಟಾಗುತ್ತಿತ್ತು.
ಗ್ರಾಮಸ್ಥರು ಇಲ್ಲಿನ ರಸ್ತೆಗಳಲ್ಲಿನ ಹೊಂಡಕ್ಕೆ ಮಣ್ಣು ತುಂಬುವ ಮೂಲಕ ದುರಸ್ಥಿ ಮಾಡಿದ್ದು ವಾಹನ ಸವಾರರಿಗೆ ಅನುಕೂಲವಾಗುವುದರ ಜೊತೆಗೆ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದಾರೆ.




