ದಾಂಡೇಲಿ : ತಾಲೂಕಿನ ಕೇರವಾಡದಲ್ಲಿ ಸ್ಥಗಿತಗೊಂಡ ಶ್ರೇಯಸ್ ಮತ್ತು ಶ್ರೀನಿಧಿ ಕಾರ್ಖಾನೆಯ ಕುರಿತಂತೆ ಶಾಸಕರಾದ ಆರ್ ವಿ ದೇಶಪಾಂಡೆಯವರು ನಗರದ ಅರಣ್ಯ ಪ್ರವಾಸಿ ಮಂದಿರದಲ್ಲಿ ಸಭೆಯನ್ನು ನಡೆಸಿದರು.
ಸಭೆಯಲ್ಲಿ ಶ್ರೇಯಸ್ ಮತ್ತು ಶ್ರೀನಿಧಿ ಕಾರ್ಖಾನೆಯಲ್ಲಿರುವ ಸಮಸ್ಯೆಗಳು ಹಾಗೂ ಕಾರ್ಮಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸ್ಥಗಿತಗೊಂಡ ಕಾರ್ಖಾನೆಯ ಪುನರಾರಂಭಕ್ಕೆ ಅಗತ್ಯ ಕ್ರಮವನ್ನು ಕೈಗೊಳ್ಳಲುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಖಾನೆಯ ಮಾಲಕರಲ್ಲಿ ಒಬ್ಬರಾದ ರೆಹಮಾನ್ ಬಾಗವಾನ್ ಅವರಿಗೆ ಆರ್.ವಿ.ದೇಶಪಾಂಡೆಯವರು ಸೂಚಿಸಿದರು.
ಸಭೆಯಲ್ಲಿ ಶ್ರೇಯಸ್ ಮತ್ತು ಶ್ರೀನಿಧಿ ಕಾರ್ಖಾನೆಯ ಕಾರ್ಮಿಕರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು




