ಹಳಿಯಾಳ : ಉ.ಕ ಜಿಲ್ಲಾಡಳಿತ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಗೊಂದು ಗೋಶಾಲೆ ಯೋಜನೆಯಡಿ ಹಳಿಯಾಳ ತಾಲೂಕಿನ ದುಸಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಪುಣ್ಯಕೋಟಿ ಸರಕಾರಿ ಗೋಶಾಲೆಯನ್ನು ಶಾಸಕರಾದ ಆರ್.ವಿ.ದೇಶಪಾಂಡೆಯವರು ಲೋಕಾರ್ಪಣೆಗೊಳಿಸಿದರು.

ಗೋಶಾಲೆಯಲ್ಲಿ ಕರುಗಳ ಶೆಡ್, ಮೇವಿನ ಸಂಗ್ರಹಣಾ ಯಾರ್ಡ್, ಜಾನುವಾರು ಚಿಕಿತ್ಸೆ ವಿಭಾಗ ಹಾಗೂ ಮುಂತಾದ ಸೌಲಭ್ಯಗಳನ್ನು ಒಳಗೊಂಡಿದ್ದು, ಮದಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ದೊಡ್ಡ ಕೆರೆ, ಸಣ್ಣ ಕೆರೆ ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸಾಮಾಜಿಕ ಅರಣ್ಯ ವಲಯದಿಂದ ಗೋಶಾಲೆಯ ಜಾಗದಲ್ಲಿ ವಿವಿಧ ಗಿಡಗಳು,ಇತರೇ ಮೇವಿನ ಬೆಳೆಗಳು ಹಾಗೂ ನವಗ್ರಹವನ ಮತ್ತು ರಾಶಿವನವನ್ನು ಪುಣ್ಯಕೋಟಿ ಗೋಶಾಲೆಯಲ್ಲಿ ನಿರ್ಮಿಸಲಾಗಿದೆ.




