ಅಂಕೊಲಾದಲ್ಲಿ ರೋಟರಿಯುಂದ ನಾಳೆ ಕೆಸರುಗದ್ದೆ ಕ್ರೀಡಾಕೂಟ

ಅಂಕೋಲಾ : ರೋಟರಿ ಕ್ಲಬ್ ಅಂಕೋಲಾ ರೂರಲ್ ಮತ್ತು ಯುವಕ ಸಂಘ ಬೋಳೆ ಇವರ ಸಂಯುಕ್ತ ಆಶ್ರಯದಲ್ಲಿ ಅಂಕೊಳದ ಬೋಳೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗದ್ದೆಯಲ್ಲಿ ಕೆಸರುಗದ್ದೆ ವಾಲಿಬಾಲ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆಯನ್ನು ನಾಳೆ ರವಿವಾರ ದಿನಾಂಕ 20 ಆಗಸ್ಟ್ ರಂದು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಅಧ್ಯಕ್ಷರಾದ ಹರ್ಷಾ ನಾಯಕ ( 8277234868 ) ತಿಳಿಸಿದ್ದಾರೆ.
ಮಹಿಳೆಯರಿಗೆ ಮತ್ತು ಪುರುಷರಿಗೆ ಹಾಗೂ ಮಕ್ಕಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ವಾಲಿಬಾಲ್, ಹಗ್ಗಜಗ್ಗಾಟ ಮತ್ತು ರನ್ನಿಂಗ್ ರೇಸ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ ಸರಿಯಾಗಿ 9 ಗಂಟೆಗೆ ಕ್ರೀಡಾಕೂಟ ಪ್ರಾರಂಭ ಮಾಡಲಾಗುವುದು ಎಂದು ರೋಟರಿ ಕಾರ್ಯದರ್ಶಿ ಮಹೇಶಃ ಪೈ ತಿಳಿಸಿದ್ದಾರೆ.
ವಾಲಿಬಾಲ್ ಪಂದ್ಯ ಕೆ ಪ್ರಥಮ ಭಹುಮನ ರೂ.8000 ಮತ್ತು ದ್ವಿತೀಯ ರೂ. 4000 ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗೆ ಪ್ರಥಮ ರೂ. 4000 ಮತ್ತು ದ್ವಿತೀಯ ರೂ.3000 ಹಾಗೂ ಆಕರ್ಷಕ ಪಾರಿತೋಷಕ ನೀಡಲಾಗುವುದು.ಎಂದು ಕ್ರೀಡಾಕೂಟದ ಉಸ್ತುವಾರಿ ಕೌಸ್ತುಭ ನಾಯಕ ತಿಳಿಸಿದ್ದಾರೆ.
ಅಂಕೋಲಾ ತಾಲೂಕಿನ ಯಾವುದೇ ತಂಡ / ಕ್ರೀಡಾಪಟುಗಳು ಈ ಕ್ರೀಡಾಕೂಟಗಳಲ್ಲಿ ಭಾಗವಹಿಸಬಹುದು . ಪ್ರತಿ ತಂಡಕ್ಕೆ ಎಂಟ್ರಿ ಫೀಸ್ ರೂ.1100 ನಿಗದಿಪಡಿಸಲಾಗಿದೆ. ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಮತ್ತು ಕ್ರೀಡಾಭಿಮಾನಿಗಳಿಗೆ ಬೋಳೆ ಊರಿನ ನಾಗರಿಕರು ಊಟದ ವ್ಯವಸ್ಥೆ ಮಾಡಿರುತ್ತಾರೆ.
ಪತ್ರಿಕಾಗೋಷ್ಠಿಯಲ್ಲಿ ಖಜಾಂಚಿ ಸದಾನಂದ ನಾಯಕ, ರೋಟರಿ ಸದಸ್ಯರಾದ ತುಲಸಿದಾಸ್ ಕಾಮತ್, ಡಾ. ಸಂಜು ನಾಯಕ, ಸಂತೋಷ ಕೇನೀಕರ್ , ಶ್ರೀಧರ್ ನಾಯ್ಕ್, ವಿನಾಯಕ ಕಾಮತ, ಶಿವಾನಂದ್ ನಾಯಕ, ನವೀನ್ ದೇವರಭಾವಿ, ರವಿ ನಾಯಕ ಮುಂತಾದವರು ಉಪಸ್ಥಿತರಿದ್ದರು