ನನ್ನ ಕ್ಷೇತ್ರದಲ್ಲಿ ಅಕ್ರಮ ಮದ್ಯ ಮಾರಾಟ ಕಂಡು ಬಂದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಿ- ಶಾಸಕ ಭೀಮಣ್ಣ ನಾಯ್ಕ..

ಸಿದ್ದಾಪುರ : ನನ್ನ ಕ್ಷೇತ್ರದಲ್ಲಿ ಅಕ್ರಮ ಸರಾಯಿ ಮಾರಾಟ ಕಂಡು ಬಂದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಂದೂ ಕೂಡ ಹೇಳಿದ್ದೇನೆ ಇಂದು ಕೂಡ ಹೇಳುತ್ತಿದ್ದೇನೆ ಮುಂದು ಕೂಡ ಹೇಳುತ್ತೇನೆ
ಅಕ್ರಮ ಸರಾಯಿ ಮಾರಾಟ ಬಂದ್ ಮಾಡುವಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು ಅವರು ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ತಿಳಿಸಿದರು.
ತಮ್ಮ ಗ್ರಾಮಗಳಲ್ಲಿ ಅಕ್ರಮ ಸರಾಯಿ ಮಾರಾಟ ಕಂಡು ಬಂದಲ್ಲಿ ಸರ್ಕಾರ ನಿಗದಿಪಡಿಸಿದ ಸ್ಥಳಗಳಲ್ಲಿ ಮಧ್ಯ ಮಾರಾಟ ಮಾಡಿ ಅನಧಿಕೃತದ ಸ್ಥಳಗಳಲ್ಲಿ ಸಾರಾಯಿ ಮಾರಾಟ ಮಾಡಬೇಡಿ ಎಂದು ಮಾರಾಟಗಾರರ ವಿರುದ್ಧ ಜನರು ಧ್ವನಿ ಎತ್ತಬೇಕಾಗಿದೆ.
ಸರಾಯಿ ಮಾರಾಟದಿಂದ ಸರಕಾರಕ್ಕೆ ರೆವಿನ್ಯೂ ಬರುತ್ತಿದೆ ಆದರೆ ನಾವು ಅಕ್ರಮ ಸರಾಯಿ ಮಾರಾಟ ಮಾಡಲು ಎಂದೂ ಅವಕಾಶ ಕೊಡುವುದಿಲ್ಲ, ಸಾರ್ವಜನಿಕರು ಅಕ್ರಮ ಸರಾಯಿ ಮಾರಾಟ ಕಂಡು ಬಂದಲ್ಲಿ ಇಲಾಖೆಯ ಗಮನಕ್ಕೆ ತಂದು ಸಹಕಾರ ನೀಡಿದಲ್ಲಿ ಅಕ್ರಮ ಸಾರಾಯಿ ಮಾರಾಟ ನಿಯಂತ್ರಿಸಲು ಸಾಧ್ಯ ಎಂದ ಅವರು
ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಶಹರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿರುವ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಶುಚಿತ್ವ ಕಾಪಾಡುವಂತೆ ಸಂಬಂಧಪಟ್ಟ ಕೆ ಎಸ್ ಆರ್ ಟಿ ಸಿ ಹಾಗೂ ಗ್ರಾಮ ಪಂಚಾಯತ್ ಗಳಿಗೆ ಸೂಚಿಸಿದ್ದೇನೆ ಈಗಾಗಲೇ ಸ್ವಚ್ಛತಾ ಕಾರ್ಯಸಹ ಪೂರ್ಣಗೊಂಡಿರುತ್ತದೆ. ಬಸ್ಟಾಂಡುಗಳಲ್ಲಿ ಸುಚಿತ್ವ ಕಾಪಾಡುವಲ್ಲಿ ಸಾರ್ವಜನಿಕರು ಸಹ ಕೈಜೋಡಿಸಬೇಕಾಗಿದೆ.
ಅಡಿಕೆ ಕೊಳೆ ರೋಗಕ್ಕೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ ಸೂಕ್ತ ಸಲಹೆ ನೀಡುತ್ತಿದ್ದಾರೆ ಕೊಳೆರೋಗದಿಂದ ತುತ್ತಾದ ಅಡಿಕೆ ಬೆಳೆ ಹಾನಿಗೆ ಪರಿಹಾರ ನೀಡುವ ಕ್ರಮ ಜಾರಿಯಲ್ಲಿದೆ,
ಈಗಾಗಲೇ ಜಿಪಿಎಸ್ ಮಾಡಿಕೊಂಡಿರುವ ಅತಿಕ್ರಮಣ ದಾರರಿಗೆ ಮಂಜುರಿ ನೀಡುವ ಕಾರ್ಯವಾಗ ಬೇಕಾಗಿದೆ. ಇ ಸ್ವತ್ತಿನ ಸಮಸ್ಯೆ ಇದ್ದು ಅದನ್ನು ಬಗೆಹರಿಸಬೇಕಾಗಿದೆ. ಫಾರ್ಮ್ ನಂಬರ 3 ರ ಸಮಸ್ಯೆ ಇದ್ದು ಆ ಕುರಿತು ಸೂಕ್ತ ಕ್ರಮ ಶೀಘ್ರದಲ್ಲಿ ಕೈಗೊಳ್ಳ ಲಾಗುವುದು. ಫಾರ್ಮ್ ನಂಬರ 3 ರ ಸಮಸ್ಯೆಯಿಂದ ಜಾಗದ ಮಾಲೀಕರಿಗೆ ಮನೆ ಕಟ್ಟಿಕೊಳ್ಳುವುದು ಹಾಗೂ ಮನೆ ರಿಪೇರಿ ಮಾಡುವುದು ಸಮಸ್ಯೆಯಾಗಿದೆ.
ಯಾವುದೇ ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ಸಹ ಸಿಗುತ್ತಾ ಇಲ್ಲ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ಸಹ ತರಲಾಗಿದೆ.
ತಾಲೂಕಿನಲ್ಲಿರುವ ರಸ್ತೆಗಳ ಅಭಿವೃದ್ಧಿ ವಿಚಾರದಲ್ಲಿ ಜಿಲ್ಲಾ ಪಂಚಾಯತ್ ತಾಲೂಕ ಪಂಚಾಯತ್ ವ್ಯಾಪ್ತಿಯಲ್ಲಿ ಆಗಬೇಕಾದ ರಸ್ತೆ ದುರಸ್ತಿ ಕುರಿತು ನಮ್ಮ ಬ್ಲಾಕ್ ಅಧ್ಯಕ್ಷರು ಈಗಾಗಲೇ ಪಟ್ಟಿಯನ್ನು ಮಾಡಿಕೊಟ್ಟಿದ್ದಾರೆ ಎಲ್ಲವನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿಗಳು ಈಗಾಗಲೇ ನಾವು ಚುನಾವಣೆ ವೇಳೆಯಲ್ಲಿ ಕೊಟ್ಟ ಆಶ್ವಾಸನೆಯಂತೆ ನಮ್ಮ 5 ಕಾರ್ಯಕ್ರಮ ಗಳಲ್ಲಿ 4 ಕಾರ್ಯಕ್ರಮ ಗಳನ್ನು ಈಗಾಗಲೇ ಜಾರಿಗೆ ತಂದಿದ್ದೇವೆ. ಈಗಾಗಲೇ ಈ ಕಾರ್ಯಕ್ರಮಗಳ ಜಾರಿಗಾಗಿ ಹಲವಾರು ಕೋಟಿ ರೂಪಾಯಿ ಹಣವನ್ನು ನೀಡಿದ್ದೇವೆ. ಮುಂಬರುವ ದಿನಗಳಲ್ಲಿ ಅಭಿವೃದ್ಧಿಗಾಗಿ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಶಿರಸಿ ಹಾಗೂ ಸಿದ್ದಾಪುರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಶೀಘ್ರದಲ್ಲಿ ಶಾಶ್ವತ ಪರಿಹಾರ ಒದಗಿಸಿ ಕೊಡುವುದಾಗಿ ತಿಳಿಸಿದರು