ಕೆ.ಎಲ್.ಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸದ್ಭಾವನಾ ದಿನಾಚರಣೆ

ಅಂಕೋಲಾ: ಇತ್ತೀಚಿಗೆ ದೇಶದಲ್ಲಿ ಪ್ರಾಂತ ಭಾಷೆ ಜಲ ಗಡಿ ಜಾತಿ ಜನಾಂಗಗಳ ಹೆಸರಿನಲ್ಲಿ ಸೌಹಾರ್ದತೆ ಕದಡುವ ಮೂಲಕ ದೇಶದಲ್ಲಿ ಅಶಾಂತಿ ನಿರ್ಮಿಸುವ ಪ್ರಯತ್ನ ನಡೆಯುತ್ತಿದ್ದು ಅದರಿಂದಾಗಿ ಜಾಗತಿಕ ಮಟ್ಟದಲ್ಲಿ ಅಪಕ್ಯಾತಿ ಬರುತ್ತಿರುವುದು ಅಲ್ಲದೇ ಜಾತಿ ಧರ್ಮದ ಅಂದ ಪ್ರೀತಿ ಘರ್ಷಣೆಗೆ ಕಾರಣವಾಗುತ್ತಿರುವುದು ದೇಶದ ಪ್ರಗತಿಗೆ ತೊಡಕುಂಟು ಮಾಡಿದೆ ಎಂದು ಕೆ.ಎಲ್.ಇ ಪದವಿ ಕಾಲೇಜಿನ ಪ್ರಾಚಾರ್ಯ ಅಶ್ವತ್ ನಾರಾಯಣ ಹೆಗಡೆ ಹೇಳಿದರು.
ಅವರು ಪಟ್ಟಣದ ಕೆ.ಎಲ್.ಇ ಶಿಕ್ಷಣ ಮಹಾವಿದ್ಯಾಲಯ ಆಯೋಜಿಸಿದ ಸದ್ಭಾವನಾ ದಿನದಲ್ಲಿ ಮಾತನಾಡುತ್ತಾ ದೇಶದ ಜನರಲ್ಲಿ ಸೌಹಾರ್ದತೆ ಬರದೆ ಇದ್ದಲ್ಲಿ ಬೇರೆ ಬೇರೆ ಕಾರಣಗಳಿಂದ ದೇಶ ಚಿದ್ರ ಛಿದ್ರ ವಾಗುವುದು ಎಂದು ವಿಷಾದ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ವಿನಾಯಕ್ ಜಿ ಹೆಗಡೆ ಸದ್ಭಾವನ ದಿನದ ಪ್ರತಿಜ್ಞಾವಿಧಿ ಬೋಧಿಸಿ ಜಾತಿ ಮತ ಧರ್ಮದ ಆಧಾರದ ಮೇಲೆ ಸಂಘರ್ಷ ಮಾಡದೆ ಜನತೆ ಒಂದಾದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಪ್ರಬಲವಾಗುವುದು ಆ ಮೂಲಕ ನಾವು ದೇಶಕ್ಕೆ ಸೇವೆ ಸಲ್ಲಿಸಬೇಕಾಗಿದೆ ಎಂದರು .
ಕಾರ್ಯಕ್ರಮವನ್ನು ಎನ್ಎಸ್ಎಸ್ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಕಾಲೇಜಿನ ಪ್ರಧಾನ ಕಾರ್ಯದರ್ಶಿ ಮನೋಜ್ ಗೌಡ ಎಂ ಸ್ವಾಗತಿಸಿದರು. ವೇದಿಕೆಯಲ್ಲಿ ಎನ್ಎಸ್ಎಸ್ ಅಧಿಕಾರಿಗಳಾದ ರಾಘವೇಂದ್ರ ಕಾರ್ಯದರ್ಶಿ ಗೌರಿಶ್ ನಾಯಕ್ ಉಪಸ್ಥಿತರಿದ್ದರು. ಕು. ಶ್ರೀಕಾಂತ್ ಬಾಡ್ಕರ್ ವಂದಿಸಿದರು ಕು. ನಾಗಶ್ರೀ ನಾಯಕ್ ನಿರೂಪಿಸಿದರು