ಯಲ್ಲಾಪುರ: ತಾಲೂಕಿನ ಮಂಚಿಕೇರಿಯ ಜನತಾ ಕಾಲೋನಿಯ ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ಗಂಧದ ಕಟ್ಟಿಗೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಒಬ್ಬನನ್ನು ಬಂಧಿಸಿದ್ದಾರೆ.
ಜನತಾ ಕಾಲೋನಿಯ ಗಣೇಶ ಸೋಮು ಲಮಾಣಿ ಬಂಧಿತ ವ್ಯಕ್ತಿ. ಈತನ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು 2 ಲಕ್ಷ ರೂ ಮೌಲ್ಯದ 52 ಕೆಜಿ ಶ್ರೀಗಂಧದ ಕಟ್ಟಿಗೆ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಡಿಸಿಎಫ್ ಎಸ್. ಜಿ. ಹೆಗಡೆ, ಮಂಚಿಕೇರಿ ಎಸಿಎಫ್ ಹಿಮವತಿ ಭಟ್ ಅವರ ಮಾರ್ಗದರ್ಶನದಲ್ಲಿ ಆರ್.ಎಫ್.ಒ ಅಮಿತಕುಮಾರ ಚೌಹಾಣ ಅವರ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಪವನಕುಮಾರ ಲೋಕೂರ, ಸಂತೋಷ ಪವಾರ, ಸಂಗಮೇಶ ಅಂಗಡಿ, ಕಲ್ಲಪ್ಪ ಬರದೂರ, ಮಂಜುನಾಥ ಆಗೇರ, ಜಗದೀಶ ಪಾಲಕನವರ , ವಿರಾಜ್ ನಾಯಕ, ಗಸ್ತು ವನಪಾಲಕ ವಿಷ್ಣು ಪೂಜಾರಿ, ವಾಹನ ಚಾಲಕರಾದ ಗಂಗಾಧರ ರೆಡ್ಡಿ, ಮಂಜು ನಾಯ್ಕ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.