ಯಲ್ಲಾಪುರ:ಬರುವ ಸೆ.9 ರಂದು ನಡೆಯಲಿರುವ ರಾಷ್ಟ್ರೀಯ ಲೋಕ್ ಅದಾಲತ್ ಕುರಿತು ಪೂರ್ವಭಾವಿ ಸಭೆ ಶುಕ್ರವಾರ ನ್ಯಾಯಾಲಯದ ಆವಾರದಲ್ಲಿ ನಡೆಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಬಿ.ಹಳ್ಳಕಾಯಿ ಮಾತನಾಡಿ, ಸೆ.9 ರಂದು ಲೋಕ ಅದಾಲತ್ ನಡೆಯಲಿದೆ., ವಿಚಾರಣೆಗೆ ಬಾಕಿ ಇರುವ ಚೆಕ್ ಬೌನ್ಸ್ ಪ್ರಕರಣಗಳು, ವೈವಾಹಿಕ ಪ್ರಕರಣಗಳು, ಅಪಘಾತ ಪರಿಹಾರ ಪ್ರಕರಣಗಳು, ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಲು ವೇದಿಕೆ ಕಲ್ಪಿಸಲಾಗಿದೆ. ಇದನ್ನು ಕಕ್ಷಿದಾರರು ಸದುಪಯೋಗಪಡಿಸಿಕೊಂಡು, ಹಣ, ಸಮಯ ಉಳಿಸಿಕೊಳ್ಳಬೇಕೆಂದರು.
ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಪಾಟೀಲ, ತಹಸೀಲ್ದಾರ ಗುರುರಾಜ.ಎಂ, ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಭಟ್ಟ, ಹಿರಿಯ ನ್ಯಾಯವಾದಿ ವಿ.ಪಿ.ಭಟ್ಟ ಕಣ್ಣಿ, ಬಿಇಒ ಎನ್.ಆರ್.ಹೆಗಡೆ ಇತರರಿದ್ದರು.