ಬೆಂಗಳೂರು, ಆ.18: ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ನಮ್ಮ ಬಳಿಯಿರುವ ಮೊಬೈಲ್, ಪರ್ಸ್ ಇತ್ಯಾದಿ ವಸ್ತುಗಳು ಮಾಯವಾಗುತ್ತದೆ. ಅದರಂತೆ ಇದೀಗ ಕ್ವಾಟರ್ ಎಣ್ಣೆಗಾಗಿ ತನ್ನ ಹೊಸ ಆಟೋ ವನ್ನು ಕಳೆದುಕೊಂಡ ಘಟನೆ ಬೆಂಗಳೂರಿನ ದಾಸರಹಳ್ಳಿ ಯ 8ನೇ ಮೈಲಿ ಅಟೋಸ್ಟಾಂಡ್ನಲ್ಲಿ ನಡೆದಿದೆ. ವಿಜಯ್ ಕುಮಾರ್ ಆಟೋ ಕಳೆದುಕೊಂಡವರು. ನಿನ್ನೆ(ಆ.17) ಮಟ ಮಟ ಮಧ್ಯಾಹ್ನದ ವೇಳೆ ಹಳೆಯ ಅಟೋದಲ್ಲಿ ಬಂದಿದ್ದ ಅಪರಿಚಿತ ಚಾಲಕನೊಬ್ಬ, ಹಾಯ್ ಎಂದುಕೊಂಡು ಆತ್ಮೀಯವಾಗಿ ಈ ಸ್ಟ್ಯಾಂಡ್ನಲ್ಲಿ ಎಷ್ಟು ಕಲೆಕ್ಷನ್ ಆಗುತ್ತೆ ಅಂದುಕೊಂಡು ಪರಿಚಯಸ್ಥನ ತರ ನಟನೆ ಮಾಡಿ, ಆಟೋವನ್ನೇ ಕದ್ದುಕೊಂಡು ಹೋದ ಘಟನೆ ನಡೆದಿದೆ.
ಎಣ್ಣೆ ಕುಡಿಸಿ, ಆಟೋ ಕದ್ದ ಖದೀಮ
ಹೌದು, ಆತ್ಮೀಯವಾಗಿ ಮಾತನಾಡುತ್ತ, ಬಾ ಗುರು ಎಣ್ಣೆ ಹೊಡೆಯೋಣವೆಂದು ಪಕ್ಕದಲ್ಲೇ ಇದ್ದ ಮೂನ್ ಲೈಟ್ ಬಾರ್ಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಆತನ ದುಡ್ಡಲ್ಲೇ ಕ್ವಾಟರ್ ಎಣ್ಣೆಯನ್ನು ಕುಡಿಸಿದ್ದಾನೆ. ಬಳಿಕ ಎಣ್ಣೆ ಕುಡಿದು ಹೊಸ ಅಟೋದಲ್ಲಿ ಮಲಗಬಾರದೆಂದು ವಿಜಯ್ ಕುಮಾರ್ ಅವರು ಅರೋಪಿ ತಂದಿದ್ದ ಹಳೆಯ ಅಟೋದಲ್ಲಿ ಮಲಗಿದ್ದಾರೆ. ಅಷ್ಟೇ, ಮಲಗಿ ಎದ್ದೇಳುವಷ್ಟರಲ್ಲಿ ಆತನ ಹಳೆಯ ಅಟೋ ಬಿಟ್ಟು ಹೊಸ ಆಟೋದಲ್ಲಿ ಪರಾರಿಯಾಗಿದ್ದಾನೆ.



