ಹಳಿಯಾಳದಲ್ಲಿ ಮಾಜಿ ಶಾಸಕ‌‌ ಸುನೀಲ್ ಹೆಗಡೆಯವರಿಂದ ಹರ್ ಘರ್ ತಿರಂಗಾ ಅಭಿಯಾನದಡಿ ತಿರಂಗಾ ಧ್ವಜಾರೋಹಣ

ಹಳಿಯಾಳ :  ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದಡಿ ಇಂದು ಮಾಜಿ ಶಾಸಕರಾದ  ಸುನೀಲ್ ಹೆಗಡೆ ಅವರು ತಮ್ಮ ನಿವಾಸದ ಮೇಲೆ ಭಾರತ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ರಾಷ್ಟ್ರ ಗೀತೆಯನ್ನು ಹಾಡುವುದರ ಮೂಲಕ ತಿರಂಗಾ ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾದ ಗಣಪತಿ ಕರಂಜೇಕರ, ಪ್ರಧಾನ ಕಾರ್ಯದರ್ಶಿ ಅನಿಲ್ ಮುತ್ನಾಳೆ, ಪುರಸಭೆ ಸದಸ್ಯರಾದ ಚಂದ್ರಕಾಂತ ಕಮ್ಮಾರ, ಸಂತೋಷ ಘಟಕಾಂಬಳೆ, ಪ್ರಮುಖರಾದ ವಾಸುದೇವ ಪೂಜಾರಿ, ಇಲಿಯಾಸ್ ಬಳಗಾರ, ಆಕಾಶ ಉಪ್ಪಿನ್ ಮೊದಲಾದವರು ಉಪಸ್ಥಿತರಿದ್ದರು.