ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗೆ ಖಂಡನೆ: ಉತ್ತರ ಕನ್ನಡ ಜಿಲ್ಲಾ ಬಿಜೆಪಿ ರೈತಮೋರ್ಚಾದಿಂದ ಪ್ರತಿಭಟನೆ

ಕಾರವಾರ : ಕರ್ನಾಟಕ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ರೈತಮೋರ್ಚಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕಾಂಗ್ರೆಸ್ ವಿರುದ್ಧ ಘೋಷಣೆ ಮೊಳಗಿಸಲಾಯಿತು. ರೈತ ವಿರೋಧಿ ನೀತಿಗೆ ಖಂಡನೆ ವ್ಯಕ್ತಪಡಿಸಲಾಯಿತು. ಬಳಿಕ ಜಿಲ್ಲಾಡಳಿತದ ಮೂಲಕ ಘನತೆವೆತ್ತ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ರೈತಮೋರ್ಚಾದ ಜಿಲ್ಲಾಧ್ಯಕ್ಷರಾದ ಮಹೇಶ ಹೊಸಕೊಪ್ಪ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರ ಮಕ್ಕಳಿಗೆ ಅನುಕೂಲವಾಗುವ ವಿದ್ಯಾಸಿರಿ, ಭೂಸಿರಿ, ಶ್ರಮಶಕ್ತಿ ಸೇರಿದಂತೆ ಹಲವು ರೈತ ಪರ ಯೋಜನೆ ಜೊತೆಗೆ, ಜಿಲ್ಲೆಯಲ್ಲಿ ಗೋಶಾಲೆ ಸ್ಥಾಪಿಸಲು ಅನುದಾನ ಮಿಸಲಿಟ್ಟಿತ್ತು. ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಬಿಜೆಪಿಯ ಈ ರೈತಪರ ಯೋಜನೆಗಳನ್ನೆಲ್ಲ ರದ್ದುಪಡಿಸಿದೆ ಎಂದರು.

ಬಿಜೆಪಿ ರೈತಮೋರ್ಚಾದ ರಾಜ್ಯ ಕಾರ್ಯದರ್ಶಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಹ ಪ್ರಭಾರಿ ಶ್ರೀ ಪ್ರಸನ್ನ ಕೆರೆಕೈ ಮಾತನಾಡಿ ಕಾಂಗ್ರೆಸ್ ಬಡವರ ಹಾಗೂ ರೈತರ ವಿರೋಧಿ ಸರ್ಕಾರ. ಈ ಸರ್ಕಾರದ ವಿರುದ್ಧ ಎಲ್ಲಾ ಹಂತಗಳಲ್ಲಿ ಪ್ರತಿಭಟನೆ ನಡೆಸಲಾಗುವುದು, ಇದು ಆರಂಭ ಅಷ್ಟೇ ಎಂದರು.

ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರ ನಡೆಗೆ ಖಂಡನೆ ವ್ಯಕ್ತ ಪಡಿಸುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯಬೇಕೆಂದು ಬಿಜೆಪಿ ಪ್ರಮುಖರು ಒತ್ತಾಯಿಸಿದರು.

ಕಾರವಾರದ ಅಂಕೋಲಾ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀಮತಿ ರೂಪಾಲಿ ಎಸ್ ನಾಯ್ಕ ಮಾತನಾಡಿ ಹಿಂದೆ ಇದ್ದ ಬಿಜೆಪಿ ಸರಕಾರ, ಯಡಿಯೂರಪ್ಪನವರು ಹಾಗೂ ಬೊಮ್ಮಾಯಿ ಅವರು ತಂದ ಅನೇಕ ರೈತಪರ, ಜನಪರ ಯೋಜನೆ ರದ್ದು ಮಾಡುವ ಕೆಟ್ಟ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದು ರೈತವಿರೋಧಿ ಸರ್ಕಾರ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ ನಾಯಕ, ವಿಧಾನ ಪರಿಷತ್ ಶಾಸಕರಾದ ಶ್ರೀ ಗಣಪತಿ ಉಳ್ವೆಕರ್, ಹಳಿಯಾಳ ಮಾಜಿ ಶಾಸಕರಾದ ಶ್ರೀ ಸುನೀಲ್ ಹೆಗಡೆ, ವಿಭಾಗ ಸಹ ಪ್ರಭಾರಿ ಶ್ರೀ ಎನ್ ಎಸ್ ಹೆಗಡೆ ಮಾತನಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗುರುಪ್ರಸಾದ ಹೆಗಡೆ ನಿರ್ವಹಿಸಿದರು. ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಶ್ರೀ ರಾಜೇಂದ್ರ ನಾಯ್ಕ, ಹಾಗೂ ರೈತ ಮೋರ್ಚಾ ಜಿಲ್ಲಾ ಪ್ರಭಾರಿ ಶ್ರೀ ಗೋಪಾಲಕೃಷ್ಣ ವೈದ್ಯ, ಶ್ರೀ ಗೋವಿಂದ ನಾಯ್ಕ, ಜಿಲ್ಲಾ ವಕ್ತಾರರಾದ ನಾಗರಾಜ ನಾಯಕ, ರೈತಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರೇಮಕುಮಾರ ನಾಯ್ಕ & ಶ್ರೀ ವಿಷ್ಣುಮೂರ್ತಿ ಹೆಗಡೆ, ಹಾಗೂ ಜಿಲ್ಲೆಯ ಎಲ್ಲಾ ಮಂಡಲ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ರೈತಮೋರ್ಚಾ ಮಂಡಲ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.