ಜೋಯಿಡಾ; ತಾಲೂಕಿನ ಕುಂಬಾರವಾಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಸಾಯಿ (ದಾವುಳ್ಳಿ) ಗ್ರಾಮದಲ್ಲಿರುವ ಶ್ರೀಶೈಲ ಪೀಠದ ಶಾಖಾ ಮಠದಲ್ಲಿ ಶ್ರೀಶೈಲ ಜಗದ್ಗುರು ಮಠದ ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನಧೀಶ್ವರ ಶ್ರೀ ಶ್ರೀ ಶ್ರೀ 1008 ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜೀಯವರ ಸಾನಿಧ್ಯದಲ್ಲಿ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡಿರುವ ಇಷ್ಟಲಿಂಗ ಶಿವ ಪೂಜಾ ಅನುಷ್ಠಾನ ಕಾರ್ಯಕ್ರಮವು ಇಂದು ಶುಕ್ರವಾರ 7ನೇ ದಿನಕ್ಕೆ ಮುಂದುವರೆದಿದೆ.
ಇಂದು ಅಂಬಿಕಾನಗರದ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕರಾದ ವಿ.ಎಸ್ ಪಾಟೀಲ್, ಹುಬ್ಬಳ್ಳಿ – ಧಾರವಾಡ ಚೇಂಬರ್ ಆಫ್ ಕಾಮರ್ಸ್ ಇದರ ಮಾಜಿ ಅಧ್ಯಕ್ಷರಾದ ಎಂ.ಸಿ.ಹಿರೇಮಠ್, ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ಟ್ರಸ್ಟ್ ಕಮಿಟಿಯ ಪ್ರಕಾಶ್ ಕಿತ್ತೂರ್, ಪ್ರಮುಖರಾದ ವೀರೇಶ್ ಕಂಬಳಿ, ಶಂಕರಯ್ಯ ಜಡೆಹಿರೇಮಠ, ವೀರಶೈವಾ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಉದಯ ಶ್ರೀಕಾಂತ ಹೂಲಿ ಸೇರಿದಂತೆ ಗಣ್ಯ ಮಹನೀಯರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು .




