ಸಿದ್ದಾಪುರ ತಾಲೂಕ ಅರೋಗ್ಯ ಇಲಾಖೆ ವೈದ್ಯಾಧಿಕಾರಿ ಡಾ ಲಕ್ಷ್ಮಿಕಾಂತ ನಾಯ್ಕ್ ಉದ್ಘಾಟಿಸಿ ಮಾತನಾಡಿ ಈ ಹಿಂದೆ ಮಗುವಿಗೆ ನೀಡಬೇಕಾದ ಲಸಿಕೆ ಪಡೆಯದೆ ಇದ್ದ ಮಗುವಿಗೆ ಈ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ,
ಲಸಿಕೆ ಪಡೆಯದೆ ಇರುವಂತಹ ಮಗುವನ್ನು ಹುಡುಕಿ ಲಸಿಕೆ ಕೊಡುವುದೇ ಈ ಇಂದ್ರಧನುಷ್ ಉದ್ದೇಶವಾಗಿದೆ ಎಂದರು.
ತಾಲೂಕ ಅರೋಗ್ಯ ಇಲಾಖೆ ಅಧಿಕಾರಿ ಅರುಣ್ ಕುಮಾರ ಪ್ರಾಸ್ತಾವಿಕ ಮಾತನಾಡಿದರು.
ಕ್ಯಾದಗಿ ಆಸ್ಪತ್ರೆ ವೈದ್ಯಧಿಕಾರಿ ಅನುಷಾ, ಹಿರಿಯ ಶುಸ್ರುಕಿ ಗೀತಾ ಡಿ ಸಾವಂತ , ಅರೋಗ್ಯ ನಿರೀಕ್ಷಣ ಅಧಿಕಾರಿ ವಿಕ್ರಮ್ ನಿರ್ವಹಿಸಿದರು.
ದಡಾರ, ರೂಬೆಲ್ಲ,, ನ್ಯೂಮೋನೀಯ (ಪಿಸಿವಿ ) ಗಳಿಗೆ ಲಸಿಕೆ ನೀಡಲಾಯಿತು.