ಅಂಗಡಿ ಮಳಿಗೆ ಕಟ್ಟಡ ಕಾಮಗಾರಿಯ ಶಂಕು ಸ್ಥಾಪನೆಯನ್ನು ನೆರವೇರಿಸಿದ ಶಾಸಕ ದಿನಕರ ಶೆಟ್ಟಿ

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಮಾನ್ಯ ದಿನಕರ ಶೆಟ್ಟಿಯವರು ಕುಮಟಾ ತಾಲೂಕಿನ ಮಿರ್ಜಾನ ಗ್ರಾಮಪಂಚಾಯತ್ ಅಂಗಡಿ ಮಳಿಗೆ ಕಟ್ಟಡ ಕಾಮಗಾರಿಯ ಶಂಕುಸ್ಥಾಪನಾ ಕಾರ್ಯಕ್ರಮವನ್ನು ನೆರವೇರಿಸಿದರು.

ಶಂಕುಸ್ಥಾಪನೆಯ ನಂತರ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರು 40ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಕಟ್ಟಡ ಇದಾಗಿದ್ದು, ಇದರಿಂದ ಭವಿಷ್ಯದಲ್ಲಿ ಗ್ರಾಮ ಪಂಚಾಯತ್ ಗೆ ಒಳ್ಳೆಯ ಆದಾಯ ಸಿಗಲಿದೆ. ಅಭಿವೃದ್ಧಿಯ ವಿಷಯದಲ್ಲಿ ಮಿರ್ಜಾನ್ ಗ್ರಾಮ ಪಂಚಾಯತ್ ಒಂದು ಮಾದರಿ ಪಂಚಾಯತ್ ಎಂದರೆ ತಪ್ಪಾಗಲಾರದು. ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಬರಬಾರದು. ಪಂಚಾಯತ್ ಸುಸೂತ್ರವಾಗಿ ಕಾರ್ಯನಿರ್ವಹಿಸಲು ಅಧ್ಯಕ್ಷರು ಹಾಗೂ ಸದಸ್ಯರೆಲ್ಲರ ಸಹಕಾರ ಅತ್ಯವಶ್ಯಕ. ಇದನ್ನು ನಾವು ಮಿರ್ಜಾನ ಗ್ರಾಮಪಂಚಾಯತ್ ನಲ್ಲಿ ಕಾಣಬಹುದು. ಗ್ರಾಮಗಳ ಅಭಿವೃದ್ಧಿಗೆ ಪಂಚಾಯತ್ ಸದಸ್ಯರೆಲ್ಲರು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುತ್ತಿರುವುದು ಇಲ್ಲಿನ ವಿಶೇಷ. ಸರ್ಕಾರದಿಂದ ಅನುದಾನಗಳನ್ನು ತರುವುದು ಎಷ್ಟು ಮುಖ್ಯವೋ, ಆ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳುವುದು ಅಷ್ಟೇ ಮುಖ್ಯ. ಕಳೆದ ಅವಧಿಯಲ್ಲಿ ಮಿರ್ಜಾನ್ ಗ್ರಾ. ಪಂ. ಭಾಗದ ಅಭಿವೃದ್ಧಿಗೆ ಗರಿಷ್ಠ ಅನುದಾನವನ್ನು ಒದಗಿಸಿದಬಗ್ಗೆ ನನಗೆ ಸಂತಸವಿದೆ. ಮುಂದೆಯೂಕೂಡಾ ಎಲ್ಲ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಲಿದ್ದೇನೆ ಎಂದು ಹೇಳಿದರು.

ಮಿರ್ಜಾನ ಗ್ರಾಮಪಂಚಾಯತ ಅಧ್ಯಕ್ಷ ಶ್ರೀ ಪರಮೇಶ್ವರ ಸುಕ್ರು ಪಟಗಾರ, ಉಪಾಧ್ಯಕ್ಷೆ ಶ್ರೀಮತಿ ಸೀತಾ ಸತೀಶ ಭಟ್, ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ನಾಗರತ್ನಾ ನಾಯಕ, ಕೆ. ಆರ್. ಐ. ಡಿ. ಎಲ್. ನ ಸಹಾಯಕ ಅಭಿಯಂತರ ಶ್ರೀ ರೋಹಿತ್ ನಾಯ್ಕ, ಗ್ರಾಮಪಂಚಾಯತ್ ಸರ್ವ ಸದಸ್ಯರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಯೋಗೀಶ್ ನಾಯ್ಕ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಮಿರ್ಜಾನ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಸ್ವಾಗತಗೀತೆ ಹಾಗೂ ನಡಗೀತೆಯನ್ನು ಹಾಡಿದರು. ಮಿರ್ಜಾನ ಪಂಚಾಯತ್ ಸದಸ್ಯ ಗಣೇಶ ಅಂಬಿಗ ಅವರು ಸರ್ವರನ್ನು ಸ್ವಾಗತಿಸಿದರು, ಪಿ. ಡಿ. ಓ. ಅಮೃತಾ ಭಟ್, ಅವರು ವಂದಿಸಿದರು.