ದಾಂಡೇಲಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ಉಚಿತ ಹೃದಯ ರೋಗ ತಪಾಸಣಾ ಶಿಬಿರ

ದಾಂಡೇಲಿ : ನಗರದ ಕರ್ನಾಟಕ ಸಂಘದ ಸಭಾ ಭವನದಲ್ಲಿ ವಿಹಾನ ಹಾರ್ಟ್ ಕೇರ್ ಸೆಂಟರ್, ನಗರದ ಡಾ. ಭಟ್ ಆಸ್ಪತ್ರೆ ಹಾಗೂ ಲಯನ್ಸ್ ಕ್ಲಬ್ ದಾಂಡೇಲಿ ಇವುಗಳ ಸಹಯೋಗದಲ್ಲಿ ಭಾನುವಾರ ಜರುಗಿದ ಉಚಿತ ಹೃದಯ ರೋಗ ತಪಾಸಣಾ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿತು.

ಶಿಬಿರದ ಉದ್ಘಾಟನೆಯನ್ನು ನಗರದ ಖ್ಯಾತ ಹೃದಯ ರೋಗ ತಜ್ಞ ಡಾ. ಜಿ.ವಿ ಭಟ್ ನೆರವೇರಿಸಿದರು. ಹುಬ್ಬಳ್ಳಿಯ ವಿಹಾನ ಆಸ್ಪತ್ರೆಯ ಡಾ. ರುತುಜಾ ವಾಜಾ, ಡಾ. ರಶ್ಮಿ ಶೆಟ್ಟಿ, ಡಾ. ಬಸವರಾಜ ಹಾಗೂ ಕೇಶವ ರಂಗಾಪುರ, ಸಿಬ್ಬಂದಿಗಳಾದ ಅಲ್ವಿನ್, ವಿನಿತ್, ನಂದಿನಿ, ಶ್ವೇತಾ, ನಜೀರಾ ಮೊದಲಾದವರು ಉಪಸ್ಥಿತರಿದ್ದು ಶಿಬಿರದಲ್ಲಿ ಶುಗರ್, ಬಿ.ಪಿ. ಇ.ಸಿಜಿ. ಡಿಇಕೊ ತಪಾಸಣೆ ನಡೆಸಲು ಸಹಕರಿಸಿದರು.
ತಪಾಸಣಾ ವರದಿಯ ಪ್ರಕಾರ ಶಿಬಿರಾರ್ಥಿಗಳಿಗೆ ಡಾ. ಜಿ.ವಿ ಭಟ್, ಡಾ. ವಿದ್ಯಾ ಭಟ್, ಡಾ. ರುತುಜಾ ವಾಜಾ, ಮುಂಜಾಗ್ರತಾ ಕ್ರಮದ ಬಗ್ಗೆ ಅಗತ್ಯ ಸಲಹೆ ಸೂಚನೆ ನೀಡಿದರು.

ಶಿಬಿರದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ವೀರೇಶ ಯರಗೇರಿ, ಕಾರ್ಯದರ್ಶಿ ರವಿ ಪೈ, ಖಜಾಂಚಿ ಇಮ್ತಿಯಾಜ್ ಎಂ ಅತ್ತಾರ, ಕ್ಯಾಬಿನೆಟ್ ಸದಸ್ಯ ಯು.ಎಸ್. ಪಾಟೀಲ, ಹಿರಿಯ ಸದಸ್ಯರಾದ ಚೇತನ್ ಕುಮಾರಮಠ, ಡಾ.ನಾಸೀರ್ ಖಾನ್ ಜಂಗೂಬಾಯಿ, ನಿಕಟಪೂರ್ವ ಅಧ್ಯಕ್ಷ ಸೈಯ್ಯದ್ ಇಸ್ಮಾಯಿಲ್ ತಂಗಳ್, ಲಯನ್ಸ್ ಕ್ಲಬಿನ ಪ್ರಮುಖರುಗಳಾದ ವಿ.ಆರ್ ಹೆಗಡೆ, ನಾರಾಯಣ ಶೆಟ್ಟಿ, ಉದಯ ಶೆಟ್ಟಿ, ಪಿ.ಕೆ ಜೋಶಿ, ಗಣೇಶ್ ಖಾನಪುರಿ, ಗಜಾನನ ಕರಗಾಂವಕರ್, ಮುರಳೀಧರ್ ನಾಯ್ಕ, ಲಿಯೋ ಕ್ಲಬಿನ ಅಧ್ಯಕ್ಷ ಗುಲಾಮ್ ಅಲಿ, ಲಯನ್ಸ್ ಮತ್ತು ಲಿಯೋ ಕ್ಲಬಿನ ಸದಸ್ಯರು ಹಾಗೂ ಕೆ.ಎಲ್.ಇ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಶಿಬಿರದ ಯಶಸ್ಸಿಗೆ ಸಹಕಾರ ನೀಡಿದರು. ಶಿಬಿರದಲ್ಲಿ ಒಟ್ಟು 358 ಜನರು ಉಚಿತ ಹೃದಯ ರೋಗ ತಪಾಸಣೆ ಮಾಡಿಸಿಕೊಂಡರು.