ಚರ್ಮದ ಸಮಸ್ಯೆಯಿಂದ ಬಳಲುತ್ತಿರುವ ‘ದಿ ಕೇರಳ ಸ್ಟೋರಿ ಖ್ಯಾತಿ’ಯ ಅದಾ ಶರ್ಮ

ಇತ್ತೀಚೆಗಷ್ಟೇ ಕೇರಳ ಸ್ಟೋರಿ ಸಿನಿಮಾದ ಮೂಲಕ ಸಾಕಷ್ಟು ಖ್ಯಾತಿ ಪಡೆದಿದ್ದ ನಟಿ ಅದಾ ಶರ್ಮಾ ಇತ್ತೀಚೆಗಷ್ಟೇ ಸೋಶಿಯಲ್​​ ಮೀಡಿಯಾಗಳಲ್ಲಿ ಪೋಸ್ಟ್​​ ಒಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಬೇಸರವುಂಟು ಮಾಡಿದೆ. ಜೇನುಗೂಡುಗಳು ಎಂದೂ ಕರೆಯಲ್ಪಡುವ ಉರ್ಟೇರಿಯಾ ಎಂಬ ಚರ್ಮದ ಕಾಯಿಲೆಯಿಂದ ಬಳಲುತ್ತಿರುವ ಅದಾ ಶರ್ಮ. ಏನಿದು ಉರ್ಟೇರಿಯಾ? ಹೇಗೆ ಹರಡುತ್ತದೆ ಹಾಗೂ ಇದಕ್ಕೆ ಚಿಕಿತ್ಸೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಏನಿದು ಉರ್ಟೇರಿಯಾ?

ಉರ್ಟೇರಿಯಾ ಎಂಬ ಚರ್ಮದ ಸಮಸ್ಯೆಯನ್ನು ಜೇನುಗೂಡು ಎಂದು ಕೂಡ ಕರೆಯುತ್ತಾರೆ. ಇದು ಚರ್ಮದ ಮೇಲೆ ಊದಿಕೊಂಡ ಕೆಂಪು ಅಥವಾ ಚರ್ಮದ ಬಣ್ಣದ ಉಬ್ಬುಗಳು ಕಾಣಿಸಿಕೊಳ್ಳುತ್ತವೆ. ತುರಿಕೆಯಿಂದ ಪ್ರಾರಂಭವಾಗಿ ಸುಡುವುದು ಹಾಗೂ ಚರ್ಮದ ಹಾನಿಗೆ ಕಾರಣವಾಗಬಹುದು. ಸಾಮಾನ್ಯವಾಗಿ ಇದು ಕೈಗಳು, ಮುಖ, ತುಟಿ, ಕಿವಿಗಳು, ಗಂಟಲು ಅಥವಾ ನಾಲಿಗೆ ಸೇರಿದಂತೆ ದೇಹದ ಮೇಲೆ ಎಲ್ಲಿಯಾದರೂ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಸಮಸ್ಯೆ ಕಣ್ಮರೆಯಾಗುತ್ತವೆ.ಮಳೆಗಾಲವು ಪ್ರಾರಂಭವಾಗಿರುವುದರಿಂದ ಇಂತಹ ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಕೈ ಕಾಲು ಮುಖಗಳಲ್ಲಿ ಅತಿಯಾದ ತುರಿಕೆಯ ಅನುಭವವಾದರೆ ಆದಷ್ಟು ನಿಮ್ಮ ಹತ್ತಿರ ವೈದ್ಯರನ್ನು ಸಂಪರ್ಕಿಸಿ ಎಂದು ತಜ್ಞರು ಎಚ್ಚರಿಸುತ್ತಾರೆ.