ಯಲ್ಲಾಪುರ: ತಾಲೂಕಿನ ಕಿರವತ್ತಿಯ ಕೆ.ಪಿ.ಎಸ್.ಸಿ ಪ್ರೌಢಶಾಲಾ ಮೈದಾನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ, ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರ ಯಲ್ಲಾಪುರ ಹಾಗೂ ಕಿರವತ್ತಿ-1,2,ಮತ್ತು ಮದನೂರ ಕ್ಲಸ್ಟರಿನ ಕಿರವತ್ತಿ ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಲೀನಾ ನಾಯಕ ಮಾತನಾಡಿ ಮಕ್ಕಳು ಜೀವನದಲ್ಲಿ ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕರಿಸಿ ಮುಂದೆ ಸಾಗುತ್ತಿರಬೇಕು ಎಂದರು .
ಈ ಸಂದರ್ಭದಲ್ಲಿ ತಾಲೂಕಾ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀರಾಮ ಹೆಗಡೆ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರೀಕೊಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಜಯ ನಾಯಕ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜನಾರ್ದನ್ ಗಾಂವ್ಕರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯಕ, ಬಿ ಆರ್ ಪಿ ಸಂತೋಷ ನಾಯ್ಕ, ಶಿಕ್ಷಕ ಸುಧಾಕರ್ ನಾಯಕ ಸಿಆರ್‌ಪಿಗಳಾದ ವಿಶ್ವನಾಥ್ ಮರಾಠೆ, ಸಂತೋಷ್ ನಾಯ್ಕ, ವೆಂಕಟರಾಯ ನಾಯಕ ಇತರರಿದ್ದರು.
ಶಿಕ್ಷಕರಾದ ಗಣಪತಿ ಗೌಡ ಪ್ರತಿಜ್ಞಾ ವಿಧಿ ಬೋಧಿಸಿದರುಮ ವಿಶ್ವನಾಥ ಮರಾಠೆ ರವರು ಸ್ವಾಗತಿಸಿದರು. ಗಂಗಾಧರ ಲಮಾಣಿ ನಿರ್ವಹಿಸಿದರು. ಸಂತೋಷ್ ನಾಯ್ಕ ವಂದಿಸಿದರು.