ಭಟ್ಕಳ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಿ.ಎಲ್.ಓ ಕರ್ತವ್ಯದಿಂದ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ತಹಸೀಲ್ದಾರ ಅವರಿಗೆ ಇಲ್ಲಿನ ತಾಲೂಕು ಆಡಳಿತ ಸೌಧದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳ ಘಟಕ ಹಾಗೂ ಇನ್ನುಳಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಭಟ್ಕಳ ತಾಲೂಕಿನ ಪ್ರಾಥಮಿಕ ಶಾಲಾ ಬಿ.ಎಲ್.ಓ ಶಿಕ್ಷಕರು ಮತ್ತು ಬಿ.ಎಲ್.ಓ. ಮೇಲ್ವಿಚಾರಕರು ತಮ್ಮಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುವುದೆಂದರೆ, ಭಟ್ಕಳ ತಾಲೂಕಿನಲ್ಲಿ 103 ಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದ್ದಿರುತ್ತದೆ, ಶಿಕ್ಷಕರನ್ನು ಹೊರತುಪಡಿಸಿ ಬೇರೆ ಬೇರೆ 12 ಇಲಾಖೆಯ ನೌಕರರನ್ನು ಬಿ.ಎಲ್.ಓ ಗಳಾಗಿ ನೇಮಿಸಿಕೊಳ್ಳಲು ಅವಕಾಶ ಇದ್ದಾಗಲೂ 125 ಕ್ಕೂ ಹೆಚ್ಚು ಶಿಕ್ಷಕರನ್ನು ಬೋಧಕೇತರ ಕರ್ತವ್ಯವಾದ ಬಿ.ಎಲ್.ಬ ಕರ್ತವ್ಯಕ್ಕೆ ನೇಮಿಸಲಾಗಿದೆ. ಬಿ.ಎಲ್.ಓ ಆಗಿ ನಮೂನೆಗಳ ಸಂಗ್ರಹ, ಮನೆಭೇಟಿ, ಪಂಚನಾಮೆ, ಮತದಾರೊಂದಿಗೆ ಮಾಹಿತಿ ವಿನಿಮಯ ಮೊಬೈಲನಲ್ಲಿ ಮಾಹಿತಿ ಇಂದೀಕರಣ, ಆಗಾಗ ಕಛೇರಿ, ಭೇಟಿ ಮಾಡಬೇಕಾಗಿದ್ದರಿಂದ ಬೋಧನೆಯಲ್ಲಿ ನಿರಂತರತೆ ಮತ್ತು ಏಕಾಗ್ರತೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಷ್ಟೇ ಅಲ್ಲದೆ ಬಿ.ಎಲ್.ಓಗಳನ್ನೇ ಕೋವರ್ಡ್ ಕರ್ತವ್ಯ,ಇತರೆ ಸಮೀಕ್ಷೆಗಳಿಗೂ ಪದೇ ಪದೇ ಬಳಸಿಕೊಳ್ಳುತ್ತಿರುವುದರಿಂದ ಶಿಕ್ಷಕರು ಒತ್ತಡ ಮತ್ತು ಮಾನಸಿಕವಾಗಿ ಗೊಂದಲಕ್ಕೆ ಶೈಕ್ಷಣಿಕ ಚಟುವಟಿಕೆಗಳನ್ನೇ ಪೂರ್ಣಗೊಳಿಸುವುದು ಕಷ್ಟಕರವಾಗಿದೆ. ಹೀಗಿರುವಾಗ ಬಿ.ಎಲ್.ಓ ಕಾರ್ಯವು ಶಿಕ್ಷಕರಿಗೆ ಹೆಚ್ಚಿನ ಹೊರೆಯಾಗಿದೆ. ಹೆಚ್ಚಿನ ಒತ್ತಡದಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿರುವ ಪರಿಣಾಮವಾಗಿ ವಿದ್ಯಾರ್ಥಿಗಳ ಮೂಲಭೂತ ಹಕ್ಕಾದ ಗುಣಮಟ್ಟದ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಿಕ್ಷಕರನ್ನು ಮತಗಟ್ಟೆ ಮಟ್ಟದ ಅಧಿಕಾರಿ ಸೇರಿದಂತೆ ಇತರೆ ಬೋಧಕೇತರ ಕಾರ್ಯಗಳಿಗೆ ನಿಯೋಜನೆ ಮಾಡದಂತೆ ಇಲಾಖೆ ಮತ್ತು ಸರಕಾರದ ಆದೇಶ ಮತ್ತು ರಾಜ್ಯ ಉಚ್ಛ ನ್ಯಾಯಾಲಯದ ತೀರ್ಮಾನ ಸಹ ಇದ್ದಿರುವುದು ಉಲ್ಲೇಖಿಸಲಾಗಿದೆ. ಶಿಕ್ಷಕರು ಬೋಧಕೇತರ ಕಾರ್ಯ ನಿರ್ವಹಿಸುವುದು ಈ ಮೇಲಿನ ಉಲ್ಲೇಖಿತ ಸುತ್ತೋಲೆಗಳ ಪ್ರಕಾರ ತಪ್ಪಾಗುವುರಿಂದ, ಪಾಲಕ ವರ್ಗದಿಂದ ಶಿಕ್ಷಕರು ಬೋಧಕೇತರ ಕೆಲಸದಲ್ಲೇ ಕಾಲ ಕಳೆಯತ್ತಾರೆಂಬ ವಿರೋಧವನ್ನು ಎದುರಿಸಬೇಕಾಗಿದೆ.
ತಾಲೂಕಿನ ಎಲ್ಲಾ ಬಿ.ಎಲ್.ಓ. ಶಿಕ್ಷಕರನ್ನು ಕಾರ್ಯದಿಂದ ಬಿಡುಗಡೆಗೊಳಿಸಿ ಶೈಕ್ಷಣಿಕ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಬೇಕೆಂದು ತಹಸೀಲ್ದಾರ ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಭಟ್ಕಳ ಗಣೇಶ ಹೆಗಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಂ.ಡಿ.ನಾಯ್ಕ, ರಾಜ್ಯ ಪರಿಷತ್ತಿ ಸದಸ್ಯ ಪ್ರಕಾಶ ಶಿರಾಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಎನ್.ನಾಯ್ಕ,
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ದಿನೇಶ ದೇಶಭಂಡಾರಿ, ಹಾಗೂ ತಾಲ್ಲೂಕು ಬಿಲ್ಒ ಉಪಸ್ಥಿತಿ ಇದ್ದರು.