ಹಳಿಯಾಳ : ಶಾಸಕರಾದ ಆರ್.ವಿ.ದೇಶಪಾಂಡೆಯವರು ಪಟ್ಟಣದಲ್ಲಿರುವ ತರಕಾರಿ ಮಾರ್ಕೆಟಿಗೆ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತರಕಾರಿ ಮಾರಾಟ ಮಾಡಲು ಬಂದಿದ್ದ ರೈತರ ಜೊತೆ ಕೆಲ ಹೊತ್ತು ಆರ್.ವಿ.ದೇಶಪಾಂಡೆಯವರು ಚರ್ಚೆ ನಡೆಸಿದರು. ತರಕಾರಿ ಮಾರ್ಕೆಟ್ ಪರಿಶೀಲನೆಗೆ ಬಂದಿದ್ದ ಆರ್.ವಿ.ದೇಶಪಾಂಡೆಯವರು ತರಕಾರಿ ವರ್ತಕರ ಜೊತೆ ಮಾತುಕತೆ ನಡೆಸಿದ ಬಳಿಕ ಅವರು ಸಹ ತಮ್ಮ ಮನೆಗೆ ತರಕಾರಿ ಖರೀದಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.