ದಾಂಡೇಲಿ : ಮೊಸಳೆ ಎಂದ ತಕ್ಷಣ ಥಟ್ಟನೆ ನೆನಪಿಗೆ ಬರುವ ಊರು ದಾಂಡೇಲಿ ಎಂಬಂತಾಗಿರುವುದು ವಾಸ್ತವ ಸತ್ಯ. ಅದೇನೆ ಇರಲಿ, ನಗರದ ಕುಳಗಿ ರಸ್ತೆಯ ಹತ್ತಿರವಿರುವ ಅನಿಲ್ ಕೋಲೂರು ಎಂಬವರ ಹೊಲದಲ್ಲಿ ಮೊಸಳೆಯ ಮರಿಯೊಂದು ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ.
ಮೊಸಳೆ ಮರಿ ಪ್ರತ್ಯಕ್ಷವಾಗಿರುವುದನ್ನು ಗಮನಿಸಿದ ಅನಿಲ್ ಕೋಲೂರು ಅವರು ಪತ್ರಕರ್ತ ರಾಜೇಶ್ ತಳೇಕರ್ ಅವರ ಸಹಕಾರದಲ್ಲಿ ಮರಳಿ ಕಾಳಿ ನದಿಗೆ ಮೊಸಳೆಯ ಮರಿಯನ್ನು ಬಿಟ್ಟಿದ್ದಾರೆ. ನದಿಗಿಂತ ಕೇವಲ 75 ಮೀಟರ್ ದೂರದಲ್ಲಿ ಹೊಲವಿರುವುದರಿಂದ ದಾರಿ ತಪ್ಪಿ ಹೊಲದ ಕಡೆ ಮೊಸಳೆ ಮರಿ ಬಂದಿದೆ.