ಸಮಾಜ ಸೇವಕ ಅನಿಲ್ ಪಾಟ್ನೇಕರ್ ಅವರಿಗೆ ಸನ್ಮಾನ

ದಾಂಡೇಲಿ : ಪ್ರವಾಸೋದ್ಯಮಿ ಹಾಗೂ ಸಮಾಜಸೇವಕರಾದ ಅನಿಲ್ ಪಾಟ್ನೇಕರ್ ಅವರನ್ನು ನಗರದ ಹಳೆ ನಗರ ಸಭಾ ಕಟ್ಡಡದಲ್ಲಿರುವ ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಸಾಪ ವತಿಯಿಂದ ಗೌರವಪೂರ್ವಕವಾಗಿ ಸನ್ಮಾಸಲಾಯ್ತು.

ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ, ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಯನ್ನು ಗಮನಿಸಿ ಅನಿಲ್ ಪಾಟ್ನೇಕರ್ ಅವರನ್ನು ಕಸಾಪ ವತಿಯಿಂದ ಕಸಾಪ ಜಿಲ್ಲಾಧ್ಯಕ್ಷರಾದ ಬಿ.ಎನ್.ವಾಸರೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆಯವರು ಸನ್ಮಾನಿಸಿದರು.