ದಾಂಡೇಲಿ : ನಗರದ ಹಳೆದಾಂಡೇಲಿಯ ಪರಶುರಾಮ ದತ್ತ ಹರಿಜನ ಅವರ ಮನೆಯಲ್ಲಿ ಕಳೆದ 11 ವರ್ಷಗಳಿಂದ ಮೊಹರಂ ಹಬ್ಬವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಮನೆಯ ಒಂದು ಬದಿಯಲ್ಲಿ ಪಂಜಗಳನ್ನಿಟ್ಟು ಇಲ್ಲಿ ಪ್ರತಿದಿನ ಮುಸ್ಲಿಂ ಧರ್ಮಗುರುಗಳಿಂದ ಪೂಜೆಯನ್ನು ನೆರವೇರಿಸಲಾಗುತ್ತಿದೆ.
ತಾನೊಬ್ಬ ಹಿಂದೂವಾಗಿದ್ದರೂ ಮೊಹರಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸುವ ಮೂಲಕ ಪರಶುರಾಮ ದತ್ತ ಹರಿಜನ ಅವರು ಪರಸ್ಪರ ಸೌಹಾರ್ದತೆಯ ಸಂದೇಶವನ್ನು ಸಾರಿದ್ದಾರೆ.